ಲೈಫ್ & ಸ್ಟೈಲ್

ಅಪ್ಪಿ ತಪ್ಪಿಯೂ ರಾತ್ರಿ 10ಗಂಟೆಯ ನಂತರ ಈ ಕೆಲಸ ಮಾಡದಿರಿ!

ರಾತ್ರಿ ಹತ್ತು ಗಂಟೆಯ ನಂತರ ಯಾವುದೇ ಕೆಲಸ ಮಾಡಿದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ನವದೆಹಲಿಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯವರ ಪ್ರಕಾರ ರಾತ್ರಿ ಹಲವು ಕೆಲಸಗಳನ್ನು ಮಾಡುವುದರಿಂದ ಆ್ಯಸಿಡಿಟಿ, ಗ್ಯಾಸ್ಟ್ರಿಕ್, ಬೊಜ್ಜು, ಖಿನ್ನತೆ ಆವರಿಸಲಿದೆ. ನಿದ್ರೆ ಸರಿಯಾಗಿ ಬರುವುದಿಲ್ಲ.

ಹೆಚ್ಚಿನ ಊಟ: ತಡರಾತ್ರಿಯಲ್ಲಿ ಹೆಚ್ಚು ಆಹಾರ ಸೇವಿಸಿ ಮಲಗುವುದರಿಂದ ಎಸಿಡಿಟಿ, ಗ್ಯಾಸ್ ಸಮಸ್ಯೆ ಎದುರಾಗುತ್ತದೆ, ನಿದ್ರೆ ಹಾಳಾಗುತ್ತದೆ.

ಚಹ-ಕಾಫಿ ಸೇವನೆ: ಇವುಗಳನ್ನು ಸೇವಿಸುವುದರಿಂದ ನಿದ್ರೆ ಬರಲಾರದು. ಪದೇ ಪದೇ ಮೂತ್ರ ವಿಸರ್ಜಿಸಬೇಕಾಗಿ ಬರುವುದರಿಂದ ಎಚ್ಚರಗೊಳ್ಳಬೇಕಾಗಿ ಬರಲಿದೆ. ಎಸಿಡಿಟಿಯೂ ಆಗಲಿದೆ.

ಧೂಮ್ರಪಾನ : ನಿದ್ರೆಗೂ ಮುನ್ನ ಧೂಮ್ರಪಾನ ಮಾಡುವುದರಿಂದ ನಿದ್ರಾಭಂಗವಾಗಲಿದೆ. ಪಚನಕ್ರಿಯೆ ಸರಾಗವಾಗಿ ಆಗದೆ ಆರೋಗ್ಯ ಹದಗೆಡಲಿದೆ.

ಶರಾಬು ಸೇವನೆ : ತಡರಾತ್ರಿ ಶರಾಬು ಸೇವನೆಯಿಂದ ದೇಹದಲ್ಲಿ ಏರಿಳಿತ ಕಂಡು ಬರಲಿದ್ದು, ಪಚನಕ್ರಿಯೆ ಸರಾಗವಾಗಿ ನಡೆಯದೆ ತಲೆನೋವು ಬರಲಿದೆ.

ಸ್ಪೈಸಿ , ಜಂಕ್ ಫುಡ್ ಸೇವನೆ : ತಡರಾತ್ರಿ ಹೆಚ್ಚು ಸ್ಪೈಸಿ ಮತ್ತು ಜಂಕ್ ಫೂಡ್ ಗಳನ್ನು ಸೇವಿಸುವುದರಿಂದ ಎಸಿಡಿಟಿ, ಗ್ಯಾಸ್ಟ್ರಿಕ್, ಹೊಟ್ಟೆ ಕೆಡುವ ಸಮಸ್ಯೆಗಳು ಉಂಟಾಗಲಿದೆ.

ಸಿಹಿ ಅಥವಾ ಚಾಕಲೇಟ್ : ತಡರಾತ್ರಿ ಸಿಹಿತಿಂಡಿಗಳು ಅಥವಾ ಚಾಕಲೇಟ್ ಸೇವನೆಯಿಂದ ನಿದ್ರಾಭಂಗವಾಗಲಿದೆ. ದೇಹದಲ್ಲಿ ಕೊಬ್ಬು ಸೇರಿ ಬೊಜ್ಜು ಬೆಳೆಯಲಿದೆ.

ಮೊಬೈಲ್ ಬಳಕೆ : ತಡರಾತ್ರಿ ಮೊಬೈಲ್, ಟಿವಿ. ಕಂಪ್ಯೂಟರ್  ಬಳಕೆಯಿಂದಾಗಿ ಕಣ್ಣುಗಳು ಮತ್ತು ಮೆದುಳಿನ ಮೇಲೆ ದುಷ್ಪರಿಣಾಮವುಂಟಾಗಲಿದೆ.

ಫ್ರೂಟ್ಸ್ ಜ್ಯೂಸ್ ,ಕೋಲ್ಡ್ ಡ್ರಿಂಕ್ಸ್ : ಇವುಗಳ ಸೇವನೆಯಿಂದ ಎಸಿಡಿಟಿಯ ಹೊರತಾಗಿ ಇದರಲ್ಲಿರುವ ಸಕ್ಕರೆ ಅಂಶವು ಬೊಜ್ಜನ್ನು ಹೆಚ್ಚಿಸಲಿದೆ.

ಸ್ನಾನ: ತಡರಾತ್ರಿಯಲ್ಲಿ ಸ್ನಾನ ಮಾಡುವುದರಿಂದ ನಿದ್ರೆ ಬರಲಾರದು. ಕೆಲವು ಗಂಟೆಗಳ ವರೆಗೆ ನಿದ್ರೆಗಾಗಿ ಕಾಯಬೇಕಾಗಲಿದೆ. ಆದ್ದರಿಂದ ಆದಷ್ಟು ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ತಡರಾತ್ರಿ ಇವುಗಳ ಸೇವನೆಯನ್ನು ನಿಲ್ಲಿಸಿ. (ಎಸ್.ಎಚ್)

Leave a Reply

comments

Related Articles

error: