ಕರ್ನಾಟಕಮನರಂಜನೆ

ಬೆಂಗಳೂರಿನ ಶ್ರೀನಿಧಿ ಶೆಟ್ಟಿಗೆ ಅತ್ಯಂತ ಆಕರ್ಷಕ ಮಹಿಳೆ ಪ್ರಶಸ್ತಿ

ಬೆಂಗಳೂರು, ಜೂ.30: ಟೈಮ್ಸ್ ಬಿಡುಗಡೆ ಮಾಡಿರುವ 2016ರ ಅತ್ಯಂತ ಆಕರ್ಷಕ ಮಹಿಳೆಯರ ಪಟ್ಟಿಯಲ್ಲಿ  50 ಜನರ  ಪೈಕಿ ಬೆಂಗಳೂರಿನ ಚೆಲುವೆ ಶ್ರೀನಿಧಿ ಶೆಟ್ಟಿ  ಮೊದಲ ಸ್ಥಾನ ಪಡೆದಿದ್ದಾರೆ.

ಆನ್ ಲೈನ್ ನಲ್ಲಿ ನಡೆಸಲಾಗಿದ್ದ ಈ ಸ್ಪರ್ಧೆಯಲ್ಲಿ  ಜೂರಿ ಮೆಂಬರ್ ಗಳು ಕೂಡ ಶ್ರೀನಿಧಿ ಶೆಟ್ಟಿಯನ್ನೇ ಆಯ್ಕೆ ಮಾಡಿದ್ದಾರೆ. ಶ್ರೀನಿಧಿ ಶೆಟ್ಟಿ ಎರಡು ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.  ಮಿಸ್ ಸುಪ್ರಾ ನ್ಯಾಶನಲ್ ಹಾಗೂ ಮಿಸ್ ಏಷ್ಯಾ & ಓಶನಿಯಾ ಸ್ಪರ್ಧೆಯಲ್ಲಿ ಜಯಗಳಿಸಿದ್ದು, ಬ್ಯೂಟಿ ಕ್ವೀನ್ ಪಟ್ಟ ಪಡೆದಿದ್ದಾರೆ.

ಒಂದೇ ವರ್ಷ ಎರಡೂ ಪ್ರಶಸ್ತಿ ಗೆದ್ದ ಮೊದಲ ಸ್ಪರ್ಧಿ ಶ್ರೀನಿಧಿ ಶೆಟ್ಟಿ. ಬ್ಯೂಟಿ, ಬ್ರೈನ್ ಮತ್ತು ಸ್ಟೈಲ್ ಎಲ್ಲದರಲ್ಲೂ ಸೈ ಎನಿಸಿಕೊಂಡಿರೋ ಶ್ರೀನಿಧಿ ಟೈಮ್ಸ್ ನ ಅತ್ಯಂತ ಆಕರ್ಷಕ ಮಹಿಳೆ ಅನ್ನೋ ಗೌರವಕ್ಕೂ ಪಾತ್ರವಾಗಿದ್ದಾರೆ. ಒಂದೇ ವರ್ಷ ಮೂರು ಪ್ರಶಸ್ತಿಗಳು ಒಲಿದಿರುವುದರಿಂದ ಶ್ರೀನಿಧಿ ಫುಲ್ ಖುಷಿಯಾಗಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: