ಮೈಸೂರು

ಫಲಪುಷ್ಪ ಪ್ರದರ್ಶನಕ್ಕೆ ತೆರೆ: ಹೂತೋಟದಲ್ಲಿ ಯದುವೀರ್, ತ್ರಿಷಿಕಾ ಸುತ್ತಾಟ

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕುಪ್ಪಣ್ಣ ಪಾರ್ಕ್‍ನಲ್ಲಿ 12 ದಿನಗಳ ಕಾಲ ಆಯೋಜನೆಗೊಂಡಿದ್ದ ಫಲಪುಷ್ಪ ಪ್ರದರ್ಶನ ಬುಧವಾರ ಕೊನೆಗೊಂಡಿತು.

‘ಗೇಟ್‍ವೇ ಆಫ್ ಇಂಡಿಯಾ’, ‘ತೇಜಸ್’, ‘ಮ್ಯೂಜಿಕಲ್ ಫೌಂಟೇನ್‍ ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿದ್ದವು. ಪ್ರದರ್ಶನದ ಕೊನೆ ದಿನವಾದ ಬುಧವಾರದಂದು ಅತ್ಯಧಿಕ ಸಂಖ್ಯೆಯಲ್ಲಿ ಜನ ಭೇಟಿ ನೀಡಿ ಹೂಗಳ ಅಂದವನ್ನು ಕಣ್ತುಂಬಿಕೊಂಡರು. ಮಹರಾಜ ಯದುವೀರ್ ಕೃಷ್ಣದತ್ತ ಒಡೆಯರ್, ಯುವರಾಣಿ ತ್ರಿಷಿಕಾ ಕುಮಾರಿ ಸಮಾರೋಪದ ಪ್ರಮುಖ ಕೇಂದ್ರಬಿಂದುಗಳಾಗಿದ್ದರು. 2016ನೇ ಫಲಪುಷ್ಪ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಚಿವ ಡಾ.ಎಚ್.ಸಿ. ಮಹದೇವಪ್ಪ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆಡಳಿತಾಧಿಕಾರಿಗಳ ಕಚೇರಿ ತೋಟಗಳು: ಭಾರತೀಯ ರಿಸರ್ವ್ ಬ್ಯಾಂಕ್, ನೋಟು ಮುದ್ರಣ ಪ್ರೈ.ಲಿ.(ಪ್ರ), ಮೈಸೂರು ವಿವಿ ತೋಟಗಾರಿಕಾ ವಿಭಾಗ(ದ್ವಿ) ಮೈಸೂರು ಅರಮನೆ ಮಂಡಳಿ(ತೃ).

ಕೈಗಾರಿಕಾ ಸಂಸ್ಥೆ ತೋಟಗಳು: ಬಿಇಎಂಎಲ್(ಪ್ರ), ನಂಜನಗೂಡು ಬ್ರೇಕ್ಸ್ ಇಂಡಿಯಾ ಲಿಮಿಟೆಡ್(ದ್ವಿ) ರಿಸರ್ರ್ಚ್ ಅಂಡ್ ಡೆವಲಪ್‍ಮೆಂಟ್ ಸಿಇಒ ಜೆ.ರಾಜಗೋಪಾಲಯ್ಯ, ಬೆಸ್ಟ್ ಲ್ಯಾಂಡ್ ಸ್ಕೇಪಿಂಗ್ ಗಾರ್ಡನ್ ಆಫ್ ಮೈಸೂರು ಹಾಗೂ ಜೆ.ಕೆ. ಟೈರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್(ತೃ).

ಶಿಕ್ಷಣ ಸಂಸ್ಥೆ ತೋಟಗಳು: ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜು(ಪ್ರ), ಇನ್ಸ್‍ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್(ದ್ವಿ), ಅಂಚೆ ಪ್ರಶಿಕ್ಷಣ ಕೇಂದ್ರ(ತೃ).

ಸರ್ವೀಸ್ ಸ್ಟೇಷನ್: ಆಲನಹಳ್ಳಿ ಬಾಲಾಜಿ ಸರ್ವೀಸ್ ಸ್ಟೇಷನ್(ಪ್ರ), ವಿದ್ಯಾರಣ್ಯಪುರಂನ ರಾಜರಾಜೇಶ್ವರಿ ಪೆಟ್ರೋಲ್ ಬಂಕ್(ದ್ವಿ), ಸಿದ್ದಲಿಂಗಪುರ ಶಿವಶಕ್ತಿ ಸರ್ವೀಸ್ ಸ್ಟೇಷನ್(ತೃ).

ಸಾರ್ವಜನಿಕ ಉದ್ಯಾನವನಗಳು ಮತ್ತು ತೋಟಗಳು: ಮೈಸೂರು ಮಹಾನಗರ ಪಾಳಿಕೆ(ಪ್ರ), ಶ್ರೀ ಆದಿಶಕ್ತಿ ಬಂದಂತಮ್ಮ ಕಾಳಮ್ಮ ದೇವಸ್ಥಾನ(ದ್ವಿ), ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್(ತೃ).

ಖಾಸಗಿ ಮನೆಗಳ ತೋಟ, ತಂಡ-1: ವಿಜಯನಗರದ ಪ್ರಭಾ ಸುಬ್ರಹ್ಮಣ್ಯ(ಪ್ರ), ಸಿದ್ದಾರ್ಥನಗರದ ಎಚ್.ರವೀಂದ್ರ(ದ್ವಿ), ಡಾ.ಹೇಮಮಾಲಿನಿ ಲಕ್ಷ್ಮಣ್(ತೃ) ಹಾಗೂ ರಾಮಕೃಷ್ಣನಗರದ ಎಚ್.ಎನ್. ವಸಂತ(ಸ).

ಖಾಸಗಿ ಮನೆಗಳ ತೋಟ, ತಂಡ-2: ಲಕ್ಷ್ಮೀಪುರಂನ ಶ್ಯಾಮಲ ಪ್ರಸನ್ನ(ಪ್ರ), ಶ್ರೀರಾಂಪುರ ಜಿ.ಆರ್. ನಾಘರಾಜು(ದ್ವಿ), ಲಕ್ಷ್ಮೀಪುರಂನ ಮಾಧವ್ ಶೆಣೈ(ತೃ).

ಹೋಟೆಲ್‍ ಗಿಡಗಳು: ಜಯಲಕ್ಷ್ಮಿಪುರಂನ ಗ್ರೀನ್ ವೇ ಹೋಟೆಲ್(ಪ್ರ), ಕೆಆರ್‍ಎಸ್ ರಸ್ತೆಯ ರಾಯಲ್ ಇನ್ ಹೋಟೆಲ್(ದ್ವಿ), ಹೆಬ್ಬಾಳ್‍ನ ಹೋಟೆಲ್ ಕಲ್ಯಾಣಿ(ತೃ).

 

Leave a Reply

comments

Related Articles

error: