ಲೈಫ್ & ಸ್ಟೈಲ್

ಕಣ್ಣಿನ ಕಪ್ಪು ವರ್ತುಲಕ್ಕೆ ಪರಿಣಾಮಕಾರಿ ಮನೆ ಮದ್ದು

ಸರ್ವ ಇಂದ್ರಿಯಂ ನಯನಂ ಪ್ರಧಾನಂ .. ಚೆಲುವೆಯ ಅಂದದ ಮೊಗಕ್ಕೆ ಕಣ್ಣೇ ಭೂಷಣ…ಕಣ್ಣೆ ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸುವುದು. ಇತ್ತೀಚಿನ ಯಾಂತ್ರಿಕ ಜೀವನದ ಒತ್ತಡದಿಂದ ಸರಿಯಾದ ಸಮಯಕ್ಕೆ ನಿದ್ರೆ ಹಾಗೂ ವಿಶ್ರಾಂತಿ ಇಲ್ಲದೇ ಕಣ್ಣಿನ ಸುತ್ತಲೂ ಕಪ್ಪು ವರ್ತುಲ (dark circle) ಉಂಟಾಗಿ ಮುಖದ ಚೆಲುವಿಗೆ ಕಪ್ಪು ಚುಕ್ಕೆಗಳಾಗುತ್ತಿದೆ. ಹದಿಹರೆಯದಲ್ಲೂ ಈಗ ಕಪ್ಪು ವರ್ತುಲ ಸಮಸ್ಯೆಯಾಗಿದೆ. ಇದಕ್ಕೆ ಮುಖ್ಯ ಕಾರಣ ವಂಶಪಾರಂಪರ್ಯ, ಕಂಪ್ಯೂಟರ್ ಮೊಬೈಲ್ ಸ್ಕ್ರೀನ್ ಗಳ ಧೀರ್ಘ ಕಾಲ ವೀಕ್ಷಣೆ, ರಕ್ತಹೀನತೆ, ಒಣಚರ್ಮ, ಅಧಿಕ ಮೆಲಾನಿನ್, ಮಾನಸಿಕ ಒತ್ತಡ, ಪೌಷ್ಟಿಕಾಂಶಗಳ ಕೊರತೆಯಿಂದ ಕಪ್ಪು ವರ್ತುಲಗಳು ಉಂಟಾಗುವವು. ಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ಕಪ್ಪು ವರ್ತುಲಕ್ಕೆ ದಿವ್ಯೌಷಧಿಯಾಗಿದ್ದು ಇದರ ಪರಿಹಾರಕ್ಕೆ ಹೀಗೊಂದಿಷ್ಟು ಟಿಪ್ಸ್.

dark-circlesಬಾದಾಮಿ ಎಣ್ಣೆ ಥೆರಪಿ : ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಚಮಚ ಬಾದಾಮಿ ಎಣ್ಣೆಯೊಂದಿಗೆ ಬೆರಳುಗಳ ತುದಿಯಿಂದ ಕಣ್ಣಿನ ಸುತ್ತಲೂ ಮಸಾಜ್ ಮಾಡುವುದರಿಂದ ಕಪ್ಪು ವರ್ತುಲಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ಮಸೂರು ಬೇಳೆ ಥೆರಪಿ : ಒಂದು ಚಮಚ ಮಸೂರ್ ಬೇಳೆ ಪುಡಿ, ಟೊಮ್ಯಾಟೋ ರಸ ಎರಡು ಚಮಚ, ಅರಿಸಿನ ಪುಡಿ ಚಿಟಿಕೆ (ಬೇಕಿದ್ದರೆ) ಮಿಶ್ರಣವನ್ನು ದಿನನಿತ್ಯ ಕಣ್ಣಿನ ಸುತ್ತ ಲೇಪಿಸಿ 15 ನಿಮಿಷ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು.

ಸೌತೆಕಾಯಿ ಥೆರಪಿ : ಪ್ರೆಷ್ ಸೌತೆಕಾಯಿಯನ್ನು ಬಿಲ್ಲೆಗಳಾಗಿ ಮಾಡಿ. ಬಿಲ್ಲೆಗಳಿಗೆ ಸ್ವಲ್ಪ ನಿಂಬೆರಸ ಹಚ್ಚಿ ಕಣ್ಣಿನ ಸುತ್ತ ಮಾಲೀಶ್ ಮಾಡಿ ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಬೇಕು. ಹೀಗೇ ದಿನಕ್ಕೆ ಎರಡು ಬಾರಿ ಮಾಡುವುದರಿಂದ ಕಪ್ಪು ವರ್ತುಲವು ಕೆಲವೇ ವಾರಗಳಲ್ಲಿ ಮಾಯವಾಗಿ ಕಣ್ಣಿನ ಆರೋಗ್ಯ ಹೆಚ್ಚುವುದು.

ಟೊಮ್ಯೊಟೋ ಕಡಲೆ ಹಿಟ್ಟು ಥೆರಪಿ : ಒಂದು ಚಮಚ ಕಡಲೆ ಹಿಟ್ಟಿಗೆ ಒಂದು ಚಮಚ ನಿಂಬೆರಸ, ಎರಡು ಚಮಚ ಟೊಮ್ಯಾಟೋ ರಸ, ಒಂದು ಚಿಟಿಕೆ ಅರಿಸಿನ (ಬೇಕಿದ್ದರೆ) ಇವುಗಳನ್ನು ಚನ್ನಾಗಿ ಮಿಶ್ರಣ ಮಾಡಿ ಅದನ್ನು ಕಣ್ಣಿನ ಸುತ್ತ ಲೇಪಿಸಿ ಮೃದುವಾಗಿ 5 ರಿಂದ 7 ನಿಮಿಷಗಳ ಕಾಲ ಮಸಾಜ್ ಮಾಡಿ ಒಣಗಿದ ಮೇಲೆ ತೊಳೆಯಬೇಕು.

ಅನನಾಸು ಹಣ್ಣಿನ ರಸಕ್ಕೆ ಅರಿಸಿನ ಪುಡಿ , ಹಸಿ ಆಲೂಗಡ್ಡೆ ರಸವನ್ನು ಬೆರೆಸಿ ಮಿಶ್ರಣವನ್ನು ಕಣ್ಣಿಗೆ ಲೇಪಿಸಿ ಅರ್ಧ ಗಂಟೆಯ ಬಳಿಕೆ ತೊಳೆಯಿರಿ. ದಿನಕ್ಕೆ ಎರಡು ಬಾರಿಯಂತೆ ಎರಡು-ಮೂರು ತಿಂಗಳು ವಿಧಾನವನ್ನು ಅನುಸರಿಸುವುದರಿಂದ ಡಾರ್ಕ್ ಸರ್ಕಲ್ ನಿವಾರಣೆಯಾಗುವುದು.

ಜಾಯಿಕಾಯಿಯನ್ನು ಹಾಲಿನಲ್ಲಿ ತೇದಿ ಎರಡು ಚಮಚದಷ್ಟು ಲೇಪನ ತಯಾರಿಸಿ ಇದನ್ನು ಕನ್ಣಿಗೆ ಲೇಪಿಸಿ ಮಾಲೀಶು ಮಾಡಿದರೆ ಕಪ್ಪು ವರ್ತುಲ ಕಡಿಮೆಯಾಗುವುದು.

ಒಂದು ಕಪ್ ಟೊಮ್ಯಾಟೋ ರಸಕ್ಕೆ ಮೂರು ಚಮಚ ಪುದೀನಾ ಎಲೆ ರಸ, ಒಂದು ಚಮಚ ಕಡ್ಲೆ ಹಿಟ್ಟು ಇವುಗಳನ್ನು ಮಿಶ್ರಣ ಮಾಡಿ ಇದನ್ನು ಕಣ್ಣಿನ ಸುತ್ತಲೂ ಲೇಪಿಸಿ ಮಸಾಜ್ ಮಾಡಿ ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. cucumberಪ್ರತಿನಿತ್ಯ ಹೀಗೆ ಮಾಡುವುದರಿಂದ ಶೀಘ್ರದಲ್ಲಿಯೇ ಉತ್ತಮ ಫಲಿತಾಂಶ ದೊರೆಯುವುದು.

 

Leave a Reply

comments

Related Articles

error: