ಮೈಸೂರು

ವಾರ್ಡ್ ನಂ.32ರ ಉಪಚುನಾವಣೆ: 10,201 ಮತದಾರರು; 56 ಸಿಬ್ಬಂದಿ ನೇಮಕ

ಮೈಸೂರು,ಜೂ.30-ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ.32ರ ಉಪ ಚುನಾವಣೆ ಜು.2 ರಂದು ಬೆಳಿಗ್ಗೆ 7 ರಿಂದ 5 ರವರೆಗೆ ಒಟ್ಟು 12 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 5053 ಪುರಷ ಮತದಾರರು, 5048 ಮಹಿಳಾ ಮತದಾರರು ಒಟ್ಟು 10,201 ಮತದಾರರು ಮತದಾನ ಮಾಡಲಿದ್ದಾರೆ.

ಮತದಾರರು ಗುರುತಿನ ಚೀಟಿಯನ್ನು ಒಳಗೊಂಡಂತೆ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್, ಬ್ಯಾಂಕ್ ಪಾಸ್ ಬುಕ್ ಇತರೆ ದಾಖಲೆಯನ್ನು ಹಾಜರುಪಡಿಸಿ ಮತದಾನ ಮಾಡಬಹುದು.

ಮತಗಟ್ಟೆ ಸಿಬ್ಬಂದಿ ನೇಮಕಾತಿ: ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ ಮತ್ತು 3 ಜನ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧ್ಯಕ್ಷಾಧಿಕಾರಿ ಮತ್ತು ಒಂದನೇ ಮತಗಟ್ಟೆ ಅಧಿಕಾರಿಗಳಿಗೆ ಒಂದು ಹಂತದ ತರಬೇತಿಯನ್ನು ನೀಡಲಾಗಿದೆ. ಒಟ್ಟು 56 ( ಮೀಸಲು ಸಿಬ್ಬಂದಿ ಸೇರಿ ) ಅಧಿಕಾರಿ / ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಮದ್ಯಮಾರಾಟ ನಿಷೇಧ: ಈ ವಾರ್ಡ್ ವ್ಯಾಪ್ತಿಯಲ್ಲಿ ಜು.1 ರ ಬೆಳಿಗ್ಗೆ 7 ರಿಂದ ಜು.2ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆ ಅಂಗವಾಗಿ ಜು.5 ರಂದು ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಮಸ್ಟರಿಂಗ್, ಡಿ.ಮಸ್ಟರಿಂಗ್ ಮತ್ತು ಎಣಿಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಚುನಾವಣೆ ಸಂಬಂಧ ಯಾವುದೇ ದೂರುಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಕಂಟ್ರೋಲ್ ರೂಂ 0821-2423800, ಮೈಸೂರು ಮಹಾನಗರ ಪಾಲಿಕೆ ಕಂಟ್ರೋಲ್ ರೂಂ 0821-2418800, 2440890, 2418816, ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂ. 0821-2418139 ಕರೆ ಮಾಡಿ ತಿಳಿಸಬಹುದು. (ವರದಿ-ಎಂ.ಎನ್)

 

Leave a Reply

comments

Related Articles

error: