ಮೈಸೂರು

ಮೈಸೂರಿನಲ್ಲಿ ತುಂತುರು ಮಳೆ: ಮೋಡಕವಿದ ವಾತಾವರಣ

ಮೈಸೂರಿನಲ್ಲಿ ಹಿಂಗಾರು ಮಳೆಯಾಗತೊಡಗಿದೆ. ದಸರಾ ಉತ್ಸವದ ಜಂಬೂ ಸವಾರಿಯ ವೇಳೆ ಹಿಂಗಾರು ಮಳೆ ತನ್ನ  ಆರ್ಭಟ ತೋರಿಸಿತ್ತು. ಅದಾದ ನಂತರ ನಗರದಲ್ಲಿ ಎರಡೂ ದಿನವೂ ತುಂತುರು ಮಳೆಯಾಗಿದೆ. ಗುರುವಾರ ಬೆಳಿಗ್ಗೆಯಿಂದಲೇ ತುಂತುರು ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣವಿದೆ.

ಜಂಬೂ ಸವಾರಿಯ ವೇಳೆ ಮೈಸೂರು ನಗರದ ಅಗ್ರಹಾರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮಳೆ ತುಸು ಜೋರಾಗಿಯೇ ಸುರಿದಿದೆ. ಆದರೆ ನಗರದ ಕುವೆಂಪುನಗರ, ಶಾರದಾದೇವಿನಗರ, ಸಿದ್ದಾರ್ಥನಗರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿರಲಿಲ್ಲ. ಬುಧವಾರ ಸಂಜೆ  ಗುಡುಗು ಸಹಿತ ತುಂತುರು ಮಳೆಯಾಗಿದೆ.

ಗುರುವಾರ ಬೆಳಿಗ್ಗೆಯಿಂದಲೇ ಮಳೆ ಹನಿಗಳ ಸಿಂಚನವಾಗತೊಡಗಿದ್ದು, ಮೋಡ ಕವಿದ ವಾತಾವರಣವಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಶಿಯಸ್, ಈಗಿನ ಉಷ್ಣಾಂಶ 24 ಡಿಗ್ರಿ ಸೆಲ್ಶಿಯಸ್, ರಾತ್ರ ಕನಿಷ್ಠ 20ಡಿಗ್ರಿ ಸೆಲ್ಶಿಯಸ್, ತೇವಾಂಶ 84%, ಗಾಳಿಯ ವೇಗ ಪ್ರತಿಗಂಟೆಗೆ 2ಕಿ.ಮೀ.ಇರಲಿದೆ.

ಮಂಡ್ಯದಲ್ಲಿ ಗುರುವಾರದಂದು ಎರಡು ಗಂಟೆಗಳಿಂದ ಭಾರಿ ಮಳೆ ಸುರಿಯುತ್ತಿದೆ.

ಹಲವು ದಿನಗಳಿಂದ ನೀರಿಲ್ಲದೇ ಒಣಗುತ್ತಿದ್ದ ರೈತರ ಬೆಳೆಗಳಿಗೆ ಈ ತುಂತುರು ಮಳೆ ಆಧಾರವಾಗಲಿದೆ.

Leave a Reply

comments

Related Articles

error: