ದೇಶಪ್ರಮುಖ ಸುದ್ದಿ

ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್‍ಕಾರ್ಡ್‍ಗಳು ಅಮಾನ್ಯವಾಗಲ್ಲ

ನವದೆಹಲಿ, ಜೂ.30 : ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್ ಕಾರ್ಡ್ ಗಳನ್ನು ಸದ್ಯಕ್ಕೆ ಅಮಾನ್ಯಗೊಳಿಸುವುದಿಲ್ಲ ಎಂದು ತೆರಿಗೆ ಇಲಾಖೆ ತಿಳಿಸಿದೆ.

ಈ ಮೊದಲು ಪ್ಯಾನ್ ಕಾರ್ಡ್‍ಗೆ ಆಧಾರ್ ನಂಬರ್ ಜೋಡಣೆ ಮಾಡಲು ಜುಲೈ 1 ರ ಗಡುವು ನಿಗದಿಪಡಿಸಲಾಗಿತ್ತು. ಆದರೆ ತಾಂತ್ರಿಕ ಕಾರಣ ಸೇರಿದಂತೆ ಇತರೆ ಕಾರಣಗಳಿಂದಾಗಿ ಆಧಾರ್-ಪ್ಯಾನ್ ಜೋಡಣೆ ಸಾಧ್ಯವಾಗದ ಪ್ಯಾನ್‍ ಕಾರ್ಡ್‍ಗಳನ್ನು ರದ್ದು ಮಾಡಲಾಗುವುದಿಲ್ಲ ಎಂದು ಇದೀಗ ತೆರಿಗೆ ಇಲಾಖೆ ತಿಳಿಸಿದೆ.

ಇದರ ಬದಲು ತೆರಿಗೆ ಪಾವತಿ ಅರ್ಜಿಯಲ್ಲಿ ಪಾವತಿದಾರರು ಆಧಾರ್ ನಂಬರ್ ಮತ್ತು ಪ್ಯಾನ್ ನಂಬರ್ ಗಳನ್ನು ನಮೂದಿಸಲು ಅವಕಾಶ ನೀಡಲಾಗಿದೆ. ತೆರಿಗೆ ಪಾವತಿ ಅಥವಾ ಇ-ತೆರಿಗೆ ಪಾವತಿ ವೇಳೆ ಆಧಾರ್ ನಂಬರ್ ಅಥವಾ ಅದರ ಎನ್‍ರೋಲ್‍ಮೆಂಟ್‍ ನಂಬರ್ ಮತ್ತು ಇದರ ಜೊತೆಗೆ ಪ್ಯಾನ್ ನಂಬರ್ ನಮೂದಿಸುವುದು ಕಡ್ಡಾಯವಾಗಿರುತ್ತದೆ.

ವಾರ್ಷಿಕ ವರಮಾನ 5 ಲಕ್ಷಕ್ಕಿಂತ ಹೆಚ್ಚಿರುವ ವ್ಯಕ್ತಿಗಳು ಕಡ್ಡಾಯವಾಗಿ ಇ-ತೆರಿಗೆ ಪಾವತಿಸಬೇಕು. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ನಿಯಮದಿಂದ ಹೊರತಾಗಿರುತ್ತಾರೆ.

ಜುಲೈ 1ರಿಂದ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಆಧಾರ್ ನಂಬರ್ ಸಲ್ಲಿಕೆ ಮಾಡುವುದು ಕಡ್ಡಾಯ. ಆಧಾರ್ ಕಾರ್ಡ್ ಇಲ್ಲದೆ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

-ಎನ್.ಬಿ.

Leave a Reply

comments

Related Articles

error: