ದೇಶಪ್ರಮುಖ ಸುದ್ದಿ

ಉಪರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ ಪ್ರಕಟ : ಆ.5ಕ್ಕೆ ಚುನಾವಣೆ, ಅಂದೇ ಫಲಿತಾಂಶ

ನವದೆಹಲಿ, ಜೂ.30 : ಭಾರತೀಯ ಚುನಾವಣಾ ಆಯೋಗವು ಉಪರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆ.5ರಂದು ಚುನಾವಣೆ ನಡೆಯಲಿದ್ದು ಅಂದಿನ ರಾತ್ರಿಯೇ ಫಲಿತಾಂಶ ಪ್ರಕಟವಾಗಲಿದೆ.

ಆಡಳಿತಾರೂಢ ಎನ್‍ಡಿಎ ಲೋಕಸಭೆಯಲ್ಲಿ ಬಹುಮತ ಹೊಂದಿದೆ. ರಾಷ್ಟ್ರಪತಿ ಚುನಾವಣಾ ವೇಳೆ ಎಐಎಡಿಎಂಕೆ ಮತ್ತು ಬಿಜೆಡಿ ಮತ್ತಿತರ ಪಕ್ಷಗಳು ಬೆಂಬಲಿಸಿವೆ. ಹೀಗಾಗಿ ಉಪರಾಷ್ಟ್ರಪತಿ ಚುನಾವಣೆಯಲ್ಲೂ ಎನ್‍ಡಿಎ ಅಭ್ಯರ್ಥಿಯೇ ಗೆಲ್ಲುವ ಸಾಧ್ಯತೆಗಳಿವೆ.

ಉಪರಾಷ್ಟ್ರಪತಿ ಚುನಾವಣೆಗೆ ಜು.4 ರಂದು ಚುನಾವಣಾ ಆಯೋಗವು ಅಧಿಕೃತ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಜು.18 ಕೊನೆಯ ದಿನ. ಜು.19 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜು.21 ರಂದು ನಾಮಪತ್ರ ಹಿಂತೆಗೆಯಲು ಕೊನೆಯ ದಿನ.

-ಎನ್.ಬಿ.

Leave a Reply

comments

Related Articles

error: