ಸುದ್ದಿ ಸಂಕ್ಷಿಪ್ತ

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಜು.1 ರಿಂದ ಕಾರ್ಯ ಆರಂಭ

ಮಡಿಕೇರಿ, ಜೂ.30:-ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಬಿಟ್ಟು ಹೋಗಿರುವ ಮತ್ತು ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಯುವ ಮತದಾರರನ್ನು (18-21 ವರ್ಷ) ನೋಂದಣಿ ಮಾಡುವ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ.

ಮತದಾರರ ಪಟ್ಟಿಯಲ್ಲಿ ಸೇರ್ಪಡಿಸುವ ವಿಶೇಷ ಕಾರ್ಯಕ್ರಮವು ಜುಲೈ, 01 ರಿಂದ ಜುಲೈ, 31 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಅವಧಿಯೊಳಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ನಮೂನೆ-6, ಸೇರ್ಪಡೆಯಾಗಿರುವ ಮತಪಟ್ಟಿಯಲ್ಲಿ ನಮೂದು ತಪ್ಪಾಗಿದ್ದಲ್ಲಿ ನಮೂನೆ 8 ರಲ್ಲಿ, ಮತಪಟ್ಟಿಯಿಂದ ಹೆಸರು ತೆಗೆಯಬೇಕಾದಲ್ಲಿ ನಮೂನೆ-7ರಲ್ಲಿ ಹಾಗೂ ಒಂದು ಮತಗಟ್ಟೆಯಿಂದ ಬೇರೊಂದು ಮತಗಟ್ಟೆಗೆ ವರ್ಗಾವಣೆ ಬಯಸಿದ್ದಲ್ಲಿ ನಮೂನೆ-8ರಲ್ಲಿ ಅರ್ಜಿಗಳನ್ನು ಪೂರಕ ದಾಖಲೆಗಳೊಂದಿಗೆ ಸಂಬಂಧಿಸಿದ ಗ್ರಾಮ ಮಟ್ಟದ ಬಿ.ಎಲ್.ಓ. ಗಳಿಂದ ಅಥವಾ ತಾಲ್ಲೂಕು ಕಚೇರಿಯಿಂದ ನಮೂನೆಗಳನ್ನು ಪಡೆದುಕೊಂಡು ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಬಿ.ಎಲ್.ಓ. ಗಳಿಗೆ ನೀಡುವಂತೆ ಹಾಗೂ ವಿಶೇಷವಾಗಿ 18-21 ವರ್ಷ ಯುವ ಮತದಾರರು ಮತಪಟ್ಟಿಗೆ ಸೇರುವಂತೆ ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಮತದಾರರ ನೋಂದಾಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಅವರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: