ಸುದ್ದಿ ಸಂಕ್ಷಿಪ್ತ

ಶಾಸಕರಿಂದ ಚೆಕ್ ವಿತರಣೆ

ಮಡಿಕೇರಿ ಜೂ.30:-ಪರಿಶಿಷ್ಟ ಜಾತಿಯ ಮೀನು ಮಾರಾಟಗಾರರಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರ ಶಿಫಾರಸ್ಸಿನಂತೆ ರಾಜ್ಯ ಉಪ ಯೋಜನೆಯಡಿಯಲ್ಲಿ ನಾಲ್ಕು ಚಕ್ರದ ವಾಹನ ಖರೀದಿಸಲು ಗೋಣಿಕೊಪ್ಪಲುವಿನ ಎಚ್.ಮುರುಗನ್ ಎಂಬುವವರಿಗೆ 4.40 ಲಕ್ಷ ರೂಗಳ ಧನಾದೇಶದ ಚೆಕ್ ಅನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ವಿರಾಜಪೇಟೆಯ ಶಾಸಕರ ಕಚೇರಿಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಪ.ಪಂ.ಅಧ್ಯಕ್ಷರಾದ ಇ.ಸಿ.ಜೀವನ್, ಮಾಜಿ ಅಧ್ಯಕ್ಷರಾದ ಕೂತಂಡ ಸಚೀನ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಪ್ರಿಯ ಹಾಜರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

Check Also

Close
error: