ಸುದ್ದಿ ಸಂಕ್ಷಿಪ್ತ

ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

ಮಡಿಕೇರಿ, ಜು.1  : ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ನೂತನ ಸಮಿತಿಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷರಾದ ಕೆ.ಸರಚಂಗಪ್ಪ ಅವರ ಆದೇಶದಂತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಘಟಕದ ಮಡಿಕೇರಿ ಬ್ಲಾಕ್ ಅಧ್ಯಕ್ಷರಾದ ಎಸ್.ಕೆ.ಸುಂದರ್ ತಿಳಿಸಿದ್ದಾರೆ.

ಉಪಾಧ್ಯಕ್ಷರುಗಳಾಗಿ ಸುಂಟಿಕೊಪ್ಪದ ಪಿ.ವಿಜಯನ್, ಮೂರ್ನಾಡುವಿನ ಅಣ್ಣು ಪುಜಾರಿ, ಸಂಚಾಲಕರಾಗಿ ಚೆಟ್ಟಳ್ಳಿಯ ಪಿ.ಆರ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾಗಿ ಮಡಿಕೇರಿಯ ಎನ್.ಸಿ.ಸುನೀಲ್, ಕೆ.ನಿಡುಗಣೆ ಗ್ರಾಮದ ಬಿ.ಎಸ್.ನಾರಾಯಣ ಪೂಜಾರಿ, ಹಾಲೇರಿಯ ಬಿ.ಡಿ.ಹರಿಣಿ, ಕಾರ್ಯದರ್ಶಿಗಳಾಗಿ ಜಂಬೂರಿನ ಕೆ.ಕೆ.ಶಶಿಧರ್, ಮರಗೋಡುವಿನ ಕೆ.ಕೆ. ಬಾಲಕೃಷ್ಣನ್(ಚಂದ್ರ), ಮಡಿಕೇರಿಯ ವಿ.ಆರ್.ಕುಮಾರ್. ಮಹಿಳಾ ಕಾರ್ಯದರ್ಶಿಯಾಗಿ 7ನೇ ಹೊಸಕೋಟೆಯ ಎಂ.ಎಂ.ಸುಮಲತಾ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನಾಗಿ ಕೆದಕಲ್ ಗ್ರಾಮದ ವಿ.ರಾಜು, ಗಾಳಿಬೀಡಿನ ಅಶ್ವಿನಿಕುಮಾರ್, ಕಂಬಿಬಾಣೆಯ ಜಿ.ವಿಜಯನ್, ನೆಲ್ಲಿಹುದಿಕೇರಿಯ ಎಸ್.ಸಿ.ಶಶಿಕುಮಾರ್, ಹರದೂರುವಿನ ಮೊಣ್ಣಪ್ಪ ಪೂಜಾರಿ, ರಂಗಸಮುದ್ರದ ಪಿ.ಭಾಸ್ಕರ್, ಮಕ್ಕಂದೂರಿನ ವಿ.ಎಂ. ಸುಲೋಚನ, ಇಗ್ಗೋಡ್ಲುವಿನ ಎನ್.ಇ.ಹೇಮ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಎಸ್.ಕೆ.ಸುಂದರ್ ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: