ಮೈಸೂರು

ಪೀಠತ್ಯಾಗ ಮಾಡಿದ ಸೋಸಲೆ ಶ್ರೀಗಳು

ಮೈಸೂರು,ಜೂ.30:- ಸೋಸಲೆ ವ್ಯಾಸರಾಜ ಮಠದ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಿಕೊಂಡ ಆರೋಪ ಎದುರಿಸುತ್ತಿದ್ದ ಸೋಸಲೆ ವ್ಯಾಸರಾಜ ಮಠದ ಶ್ರೀಗಳು ಪೀಠತ್ಯಾಗ ಮಾಡಿದ್ದಾರೆ.
ಸೋಸಲೆ ವ್ಯಾಸರಾಜ ಮಠದ  ಶ್ರೀ ವಿದ್ಯಾಮನೋಹರ ತೀರ್ಥರು ಶುಕ್ರವಾರ  ಪೀಠತ್ಯಾಗ ಮಾಡಿದರು. ಈ ಸಂಬಂಧ ಮೈಸೂರಿನ 5ನೇ ಹೆಚ್ಚುವರಿ ಪ್ರಥಮ ಸಿವಿಲ್ ನ್ಯಾಯಾಲಯಕ್ಕೆ ಅವಿಡವಿಟ್ ಸಲ್ಲಿಸಿದ್ದಾರೆ. ಡಿ.ಪ್ರಹ್ಲಾದಾಚಾರ್ ಅವರನ್ನು ಸೋಸಲೆ ವ್ಯಾಸರಾಜ ಮಠದ ಮುಂದಿನ ಪೀಠಾಧಿಪತಿಯಾಗಿ ನೇಮಕ ಮಾಡಲು ತೀರ್ಮಾನ ಮಾಡಲಾಗಿದೆ. ಸೋಸಲೆ ವ್ಯಾಸರಾಜ ಮಠದ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಿಕೊಂಡಿದ್ದಾರೆ  ಹಾಗೂ ಬೆಲೆಬಾಳುವ ಆಭರಣಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ  ಆರೋಪಕ್ಕೆ ಶ್ರೀಗಳು ಗುರಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: