ಮೈಸೂರು

ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಡೆಂಗ್ಯೂ : ಸ್ವಚ್ಚತೆಗೆ ಆಧ್ಯತೆ ನೀಡಿ

ಮೈಸೂರು.ಜೂ.30 : ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿದ್ದು ಇಲ್ಲಿಯವರೆಗೂ 1061 ಶಂಕಿತ ಡೆಂಗ್ಯೂ ಪ್ರಕರಣಗಳು ಇದ್ದು ಅದರಲ್ಲಿ 170 ಹೆಚ್ಚು ಮಂದಿಗೆ ಡೆಂಗ್ಯೂ ಸಾಬೀತಾಗಿದೆ. ಆದ್ದರಿಂದ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಖಾಲಿ ಇರುವ ನಿವೇಶನಗಳನ್ನು ಸ್ವಚ್ಚಗೊಳಿಸಬೇಕು ಹಾಗೂ ಈಗಾಗಲೇ ಬಂದಿರುವ ರಕ್ತ ತಪಾಸಣೆಯ ವರದಿಗಳನ್ನು ಬಹಿರಂಗಗೊಳಿಸಬೇಕೆಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಕೋರಿದ್ದಾರೆ.

ಸಾರ್ವಜನಿಕರ ಆರೋಗ್ಯ ಸುಧಾರಣೆ ಉದ್ದೇಶಕ್ಕಾಗಿ ಮಹಾನಗರ ಪಾಲಿಕೆ ಸೆಸ್ ವಸೂಲಿ ಮಾಡುತ್ತಿದ್ದು, ಆ ಹಣವೂ ಅದೇ ಉದ್ದೇಶಕ್ಕಾಗಿ ಉಪಯೋಗಿಸಬೇಕು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ, ಬಳಸಿದರೆ ಅದು ಅಪರಾಧವೆಂದು ಅವರು,  ಸೊಳ್ಳೆಯ ನಿಯಂತ್ರಣಕ್ಕೆ  ಲಾರ್ವಾ ನಾಶಕ ವನ್ನು ಉಚಿತವಾಗಿ ಸಿಂಪಡಿಸಬೇಕು, ಅಲ್ಲದೇ ಕರ್ತವ್ಯ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: