ಮೈಸೂರು

ಮಹಿಳೆ ಅನುಮಾನಾಸ್ಪದ ಸಾವು

ಮಹಿಳೆಯೊಬ್ಬರು ತವರುಮನೆಯಿಂದ ಪತಿ ಮನೆಗೆ ತಲುಪಿದ ಎರಡೇ ಗಂಟೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

ನಂಜನಗೂಡಿನ ನಂದಗುಂದಾಪುರ ಗ್ರಾಮದಲ್ಲಿರುವ ತಾಯಿಗೆ ಮನೆಗೆ ಆಗಮಿಸಿದ್ದ ಸ್ವಾತಿ(21), ಬುಧವಾರ ಸಂಜೆ ಬೆಂಗಳೂರಿಗೆ ಹೊರಟು 9 ಗಂಟೆ ಸುಮಾರಿಗೆ ಪತಿ ಮನೆ ಸೇರಿದ್ದರು. 11 ಗಂಟೆಗೆ ಆಕೆ ಮೃತಪಟ್ಟಿದ್ದಾಳೆಂದು ಪತಿ ಚೇತನ್ ಸ್ವಾತಿ ಮನೆಯವರಿಗೆ ಕರೆ ಮಾಡಿದ್ದಾನೆ. ಸ್ವಾತಿ ಮನೆಯವರು ಬೆಂಗಳೂರಿಗೆ ಬರುತ್ತಿದ್ದಂತೆ ಸ್ವಾತಿಯ ಪತಿ ಚೇತನ್, ಅತ್ತೆ-ಮಾವ ಪರಾರಿಯಾಗಿದ್ದಾರೆ. ಅಲ್ಲದೆ, ಸ್ವಾತಿಯನ್ನು ಆಕೆಯ ಪೋಷಕರೇ ವಿಷಪ್ರಾಷಣ ಮಾಡಿ ನೇಣು ಹಾಕಿದ್ದಾರೆ ಎಂದೂ ಆರೋಪಿಸಿದ್ದಾರೆ. ಬೆಂಗಳೂರಿನ ಮಾದನಾಯಕಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

comments

Related Articles

error: