ಕರ್ನಾಟಕ

ಸರಕು ಮತ್ತು ಸೇವಾ ತೆರಿಗೆ ಮಸೂದೆ ಜಾರಿ ವಿರೋಧಿಸಿ ಎಸ್‌ಯುಸಿಐ ಪ್ರತಿಭಟನೆ

ರಾಜ್ಯ(ಬೆಂಗಳೂರು)ಜೂ.30:- ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಜಾರಿಗೆಯನ್ನು ವಿರೋಧಿಸಿ ಎಸ್‌ಯುಸಿಐ (ಸಿ) ಸದಸ್ಯರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ(ಸಿ) ಪ್ರಧಾನ ಸಂಚಾಲಕ ವಿ.ಎನ್ ರಾಜಶೇಖರ್ ಮಾತನಾಡಿ ಜುಲೈ 1 ರಿಂದ ಜಾರಿಯಾಗುತ್ತಿರುವ ಜಿಎಸ್‌ಟಿ ಮಸೂದೆ ಸರಿಯಲ್ಲ. ಇದರಿಂದ  ರಾಜ್ಯ ಸರ್ಕಾರಗಳ ತೆರಿಗೆಗೆ ಕಟ್ಟಿಬೀಳಲಿದೆ. ಇದೇ ಎಲ್ಲಾ ಫೆಡರೆಲ್ ವಿರೋಧಿ ನಿರ್ಧಾರಗಳೆಂದು ಆರೋಪಿಸಿದರು.ಅನಗತ್ಯ ತೆರಿಗೆಗಳನ್ನು ಜಿಎಸ್‌ಟಿ ಹಾಕಲಾಗಿದೆ.ಕೇಂದ್ರ ಸರ್ಕಾರ ಜಿ‌ಎಸ್‌ಟಿ ಮಸೂದೆ ಬಗ್ಗೆ ಇದುವರೆಗೂ ಸಾಮಾನ್ಯವರ್ಗಕ್ಕೆ ಮಾಹಿತಿ ನೀಡಿಲ್ಲ. ಅದು ಅಲ್ಲದೆ ಜಿಎಸ್‌ಟಿ ಬಗೆಗಿನ ಕಾನೂನುಗಳೇ ರೂಪುಗೊಂಡಿಲ್ಲ ಎಂದು ಹೇಳಿದರು. ದೇಶದ ಪ್ರಮುಖ ಸುಧಾರಣಾ ತೆರಿಗೆ ವಿಧಾನವೆಂದು ಹೇಳಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ಕೇಂದ್ರ ಸರ್ಕಾರಕ್ಕೆ ವರವಾದರೆ ರಾಜ್ಯ ಸರ್ಕಾರಗಳೇ ಶಾಪವಾಗಲಿದೆ ಎಂದು ಕಿಡಿಕಾಡಿದರು. ರಾಜ್ಯ ವಾಣಿಜ್ಯ ತೆರಿಗೆ ತನ್ನ ವ್ಯಾಪಾರ ಮೂಲವನ್ನು ಕಳೆದುಕೊಳ್ಳಲಿದ್ದು, ಉದ್ಯೋಗ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ದೇಶದ ಜನರು ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಸ್‌ಯುಸಿಐನಲ್ಲಿ ಸದಸ್ಯರಾದ ಇ.ಜಿ. ರವಿನಂದನ್, ವಿ. ಜ್ಞಾನಮೂರ್ತಿ, ಎಂ.ಎನ್. ಶ್ರೀರಾಮ್, ರಮಾ ಸೇರಿ ಪ್ರಮುಖರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: