ಸುದ್ದಿ ಸಂಕ್ಷಿಪ್ತ

ಜು.2ಕ್ಕೆ ನಂಜನಗೂಡಿನಲ್ಲಿ ಸಂತೆ, ಜಾತ್ರೆ ನಿಷೇಧ   

ಮೈಸೂರು,ಜು.1- ನಂಜನಗೂಡು ತಾಲ್ಲೂಕಿನ ತೆರವಾಗಿರುವ ಹುಲ್ಲಹಳ್ಳಿ ಹಾಗೂ ತಾಯೂರು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ  ಉಪ ಚುನಾವಣೆಯು ಜು.2 ರಂದು ನಡೆಯಲಿದ್ದು, ಚುನಾವಣೆ ದಿನದಂದು ಮತದಾರರಿಗೆ ಮುಕ್ತ ಮತದಾನಕ್ಕೆ ಅವಕಾಶ ನೀಡುವ ಉದ್ದೇಶದಿಂದ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ರೀತಿಯ ಸಂತೆ, ಜಾತ್ರೆ ಉತ್ಸವಗಳನ್ನು ಮುಂದೂಡಿ ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶ ಹೊರಡಿಸಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: