ಸುದ್ದಿ ಸಂಕ್ಷಿಪ್ತ

ಪಶುಭಾಗ್ಯ ಯೋಜನೆ : ಅರ್ಜಿ ಆಹ್ವಾನ

ಮೈಸೂರು,ಜು.1-ಪಶು ಸಂಗೋಪನೆ ಇಲಾಖೆ ವತಿಯಿಂದ ಪಶುಭಾಗ್ಯ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳಿಂದ ರೂ. 1.20 ಲಕ್ಷಗಳವರೆಗೆ ಗರಿಷ್ಟ ಸಾಲ ಪಡೆದು ಹಸು, ಕುರಿ, ಆಡು, ಹಂದಿ, ಕೋಳಿ ಘಟಕಗಳನ್ನು ಸ್ಥಾಪಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 50 ರಷ್ಟು ಹಾಗೂ ಇತರೆ ಜನಾಂಗದವರಿಗೆ ಶೇ. 25 ರಷ್ಟು ಬ್ಯಾಂಕ್ ಎಂಡೆಡ್ ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಿದೆ.

ಮೈಸೂರು ಜಿಲ್ಲೆಗೆ ಸರ್ಕಾರದಿಂದ ಒಟ್ಟು 356 ಹೈನುಗಾರಿಕೆ ಘಟಕಗಳು, 41 ಕುರಿ / ಮೇಕೆ ಘಟಕಗಳು ಹಾಗೂ 15 ಮೊಟ್ಟೆ / ಮಾಂಸದ ಕೋಳಿ ಘಟಕಗಳ ಹಾಗೂ 16 ಹಂದಿ ಘಟಕಗಳ ಗುರಿ ನಿಗದಿಪಡಿಸಲಾಗಿದೆ.

ಪಶುಭಾಗ್ಯ ಯೋಜನೆಯಲ್ಲಿ ಸಹಾಯಧನ ಪಡೆಯಲು ಇಚ್ಛಿಸುವ ಮೈಸೂರು ಜಿಲ್ಲೆಯ ಅರ್ಹ ಫಲಾನುಭವಿಗಳು ಸಂಬಂಧಪಟ್ಟ ತಾಲ್ಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜು.31 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾಯ ತಾಲ್ಲೂಕಿನ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. (ವರದಿ-ಎಂ.ಎನ್)

 

 

 

Leave a Reply

comments

Related Articles

error: