ಪ್ರಮುಖ ಸುದ್ದಿಮೈಸೂರು

ನಾಡು ಬಿಟ್ಟು ಕಾಡು ಸೇರಲಿರುವ ಗಜಪಡೆ: ಸಾಂಪ್ರದಾಯಿಕ ಪೂಜೆಯ ಮೂಲಕ ಆತ್ಮೀಯ ಬೀಳ್ಕೊಡುಗೆ

elep-2ಮೈಸೂರು ಅರಮನೆಯ ಆವರಣದಲ್ಲಿ ಗುರುವಾರ ಬೆಳಿಗ್ಗೆ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗಜಪಡೆಗಳನ್ನು ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸುವ ಮೂಲಕ ಆತ್ಮೀಯವಾಗಿ ಬೀಳ್ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಂಬಾರಿ ಹೊತ್ತ ಆನೆ ಅರ್ಜುನ ಸೇರಿದಂತೆ ಎಲ್ಲ ಆನೆಗಳಿಗೂ ಪುರೋಹಿತರು ಪೂಜೆ ನೆರವೇರಿಸಿದರು. ಈ ಸಂದರ್ಭ ಮಾವುತರಿಗೆ ಗೌರವಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ ಈ ಬಾರಿ ಸಾಂಪ್ರದಾಯಿಕವಾಗಿ ನಡೆದ ದಸರಾ ಯಾವ ಅಡೆ-ತಡೆಗಳಿಲ್ಲದೇ ಸಾಂಗವಾಗಿ ನೆರವೇರಿದೆ. ಕಳೆದ ಒಂದು ತಿಂಗಳಿನಿಂದ ಆನೆಗಳು ಮತ್ತು ಮಾವುತರು ಇಲ್ಲೇ ಬೀಡುಬಿಟ್ಟಿದ್ದರು. ಅವರ ಸಹಕಾರದಿಂದ ಜಂಬೂಸವಾರಿ ಯಶಸ್ವಿಯಾಗಿ ನಡೆದಿದೆ. ಕಳೆದ ಬಾರಿ ಅವರಿಗೆ ಐದುಸಾವಿರ ರೂ.ಗೌರವಧನ ನೀಡಲಾಗಿತ್ತು. ಈ ಬಾರಿ ಏಳೂವರೆ ಸಾವಿರ ನೀಡಲಾಗಿದೆ. ಗೌರವಧನದಲ್ಲಿ ಹೆಚ್ಚಳ ಮಾಡಿದ್ದೇವೆ. ಅವರು ಗೌರವ ಧನ ಹೆಚ್ಚಿಸುವಂತೆ ಬೇಡಿಕೆಯನ್ನೂ ಇಟ್ಟಿದ್ದರು ಎಂದರು.

ಈ ಸಂದರ್ಭ ಅರಣ್ಯಾಧಿಕಾರಿ ಗಣೇಶ್ ಭಟ್, ಪಶುವೈದ್ಯ ನಾಗರಾಜ್, ಶಾಸಕ ಸೋಮಶೇಖರ ಮತ್ತಿತರರು ಉಪಸ್ಥಿತರಿದ್ದರು. ಅರಣ್ಯ ಇಲಾಖೆ ವತಿಯಿಂದ ಮಾವುತರು ಮತ್ತವರ ಕುಟುಂಬಿಕರಿಗೆ ಉಪಹಾರ ವಿತರಿಸಲಾಯಿತು. ಮಾವುತರನ್ನು ಅರಣ್ಯ ಇಲಾಖೆ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅರಮನೆ ಆಡಳಿ ಮಂಡಳಿ ವತಿಯಿಂದಲೂ ಮಾವುತರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ದಸರಾ ಆಕರ್ಷಣೆಯ ಪ್ರಮುಖ ಕೇಂದ್ರ ಬಿಂದು ಜಂಬೂ ಸವಾರಿ. ಅದರಲ್ಲಿ ಗಜಗಾಂಭೀರ್ಯದಿಂದ ಪಾಲ್ಗೊಂಡು ಎಲ್ಲರ ಮನಗೆದ್ದ ಗಜಪಡೆಗಳು ಗುರುವಾರ ನಾಡುಬಿಟ್ಟು ಕಾಡು ಸೇರುತ್ತಿವೆ. ಸಂಜೆಯ ವೇಳೆಗೆ ಆನೆಗಳು ಶಿಬಿರವನ್ನು ತಲುಪಲಿವೆ.

Leave a Reply

comments

Related Articles

error: