ಮನರಂಜನೆ

ನಟ ಮಾಧವನ್ ಹಾಟ್ ಫೋಟೋ ವೈರಲ್!

ದೇಶ(ನವದೆಹಲಿ) ಜು.1:- ಬಾಲಿವುಡ್ ನಟರು ಸದಾ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣದಲ್ಲಿ ಶೂಟಿಂಗ್ ನಿಂದ ಹಿಡಿದುತಾವು ಮನೆಯಲ್ಲಿ ಏನು ಮಾಡುತ್ತೇವೆ ಎನ್ನುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ನಟ ಮಾಧವನ್ ಕೂಡಾ ಅದೇ ರೀತಿ ಅಭಿಮಾನಿಗಳಿಗಾಗಿ ಒಂದು ಫೋಟೋ ಪೋಸ್ಟ್ ಮಾಡಿದ್ದು, ಇಂಟರ್ನೆಟ್ ನಲ್ಲಿ ಟ್ರಾಫಿಕ್ ಜಾಮ್ ಆಗಿತ್ತಂತೆ.

ಯಾವಾಗಲೂ ಮಾಧವನ್ ಅಭಿಮಾನಿಗಳಿಗಾಗಿ ಸೆಲ್ಫಿ ಪೋಸ್ಟ್ ಮಾಡುತ್ತಿದ್ದು ಶುಕ್ರವಾರ ಪೋಸ್ಟ್ ಮಾಡಿದ ಸೆಲ್ಫಿ ಮಾತ್ರ ಹಾಟ್ ಆಗಿತ್ತಂತೆ. ಅದಕ್ಕೆ ಅಭಿಮಾನಿಗಳು ‘ಮಾಧವನ್ ನಿಮ್ಮ ಹೃದಯಲ್ಲಿಯೇ ನೆಲೆಸಬೇಕು’ ಎಂದಿದ್ದಾರಂತೆ. ಮಾಧವನ್ ಕೂಡಾ ಫೋಟೋ ಪೋಸ್ಟ್ ಮಾಡುವಾಗ ‘ಸ್ನಾನದ ನಂತರ ಮುಂಜಾನೆಯ ಹೊಳಪು, ಒಂದು ದೀರ್ಘ ನಿದ್ರೆಯ ನಂತರ ಹೊಸತನವನ್ನು ಅನುಭವಿಸುತ್ತಿದ್ದೇನೆ’ ಎಂದು ಬರೆದಿದ್ದಾರೆ. ಇದೀಗ ಅವರ ಈ ಬರಹದ ಜೊತೆಗಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆಯಂತೆ. ಪೋಸ್ಟ್ ಮಾಡಿ ಒಂದು ದಿನದೊಳಗೆ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದಿದೆಯಂತೆ. (ಎಸ್.ಎಚ್)

Leave a Reply

comments

Related Articles

error: