ಮೈಸೂರು

ಸಾಧಕ ವೈದ್ಯರುಗಳಿಗೆ ವೈದ್ಯ ಭಾಸ್ಕರ ಪ್ರಶಸ್ತಿ ಪ್ರದಾನ

ಮೈಸೂರು, ಜು.1: ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ವಿಶ್ವ ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ವೈದ್ಯ ಭಾಸ್ಕರ ಪ್ರಶಸ್ತಿ ಪ್ರದಾನ ಮತ್ತು ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರ ಹುಟ್ಟುಹಬ್ಬದ ಶುಭ ಹಾರೈಕೆ ಕಾರ್ಯಕ್ರಮವನ್ನು ನಗರದ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಲೋಪತಿಗೆ ಪರ್ಯಾಯವಾಗಿ ಹಿರಿಯರು, ಋಷಿಗಳು ಯೋಗ, ಆಯುರ್ವೇದವನ್ನು ನೀಡಿದ್ದಾರೆ. ಆಯುರ್ವೇದ ಸಂಸ್ಕೃತಿಯ ಒಂದು ಭಾಗ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗ ಭಾರತೀಯ ಮೌಲ್ಯಗಳ ಭಾಗ ಅದನ್ನು ರೂಪಿಸಿಕೊಳ್ಳಬೇಕು. ಇದರಿಂದ ಉತ್ತಮ ಬದುಕನ್ನು ಕಟ್ಟಿಕೊಳ್ಳುವುದರೊಂದಿಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಡಾ.ಸಿ.ಬಿ.ರಾಯ್ ಅವರು ಕೇವಲ ವೈದ್ಯರಾಗಿರಲಿಲ್ಲ. ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಅಂತೆಯೇ ಎಲ್ಲರೂ ಅವರ ದಾರಿಯಲ್ಲಿ ಸಾಗಿ ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು ಎಂದು ಹೇಳಿದರು.

ಇದೇ ವೇಳೆ ಡಾ. ರಾಮಚಂದ್ರ ರಾಜೇ ಅರಸ್, ಡಾ.ಕೆ.ಎಸ್.ಶಾಂತರಾಮ್, ಡಾ.ಕೆ.ಎಸ್.ಉಮಾಶಂಕರ್, ಡಾ.ಸಿzಶ್ ಆರಾಧ್ಯ, ಡಾ.ಎ.ಎಫ್.ಕೃಷ್ಣಮೂರ್ತಿಯವರಿಗೆ ವೈದ್ಯ ಭಾಸ್ಕರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಶಿವಣ್ಣ, ಅರಗು ಮತ್ತು ಬಣ್ಣ ಕಾರ್ಖಾನೆಯ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶ್ರಾಂತ ನಿರ್ದೇಶಕ, ಡಾ.ಡಿ.ತಿಮ್ಮಯ್ಯ, ಹಿರಿಯ ಸಾಹಿತಿ ಡಾ.ಸಿ.ಪಿಕೃಷ್ಣಕುಮಾರ್, ರಘುರಾಂ, ಡಾ.ಎಂ.ಜಿ.ಆರ್.ಅರಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: