ಪ್ರಮುಖ ಸುದ್ದಿಮೈಸೂರು

ಕಾವೇರಿ ತೀರ್ಪು ಕರ್ನಾಟಕ ಪರವಾಗಿರಲಿದೆ: ಡಾ.ಹೆಚ್.ಸಿ.ಮಹದೇವಪ್ಪ

ಕಾವೇರಿ ವಿವಾದದ ತೀರ್ಪು ರಾಜ್ಯದ ಜನತೆಯ ಪರವಾಗಿಯೇ ಬರಲಿದೆ ಎನ್ನುವ ವಿಶ್ವಾಸವಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಅರಮನೆಯಲ್ಲಿ ಗುರುವಾರ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡ ಆನೆಗಳನ್ನು ಬೀಳ್ಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಡಾ.ಹೆಚ್. ಸಿ. ಮಹದೇವಪ್ಪ ಕಾವೇರಿ ವಿವಾದ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕಾವೇರಿ ನದಿ ಕುರಿತಂತೆ ವಾಸ್ತವಾಂಶ ಅರಿಯಲು ಕೇಂದ್ರದಿಂದ ಬಂದ ತಜ್ಞರ ತಂಡ ಮಂಡ್ಯ, ಮೈಸೂರುಗಳಿಗೆ ಭೇಟಿ ನೀಡಿತ್ತು. ಅವರು ಕಾವೇರಿ ನೀರಿನ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದಾರೆ.  ಅವರಿಗೆ ಇಲ್ಲಿನ ರೈತರ ಕಷ್ಟದ ಅರಿವಾಗಿದೆ. ಇಲ್ಲಿನ ಜನತೆಗೆ ಕುಡಿಯಲು ನೀರು ಸಾಕಾಗುತ್ತಿಲ್ಲ, ರೈತರ ಕೃಷಿಭೂಮಿಗಳು  ನೀರಿಲ್ಲದೇ ಒಣಗಿರುವುದನ್ನು ನೋಡಿದ್ದಾರೆ. ಅವರು ಇಲ್ಲಿನ ವಸ್ತಿಸ್ಥಿತಿಯನ್ನು ಸುಪ್ರೀಂಕೋರ್ಟ್ ಗೆ ತಿಳಿಸಲಿದ್ದಾರೆ.ಈ ಕುರಿತ ಸಂಪೂರ್ಣ ವರದಿಯನ್ನು ನೀಡಲಿದ್ದು, ತೀರ್ಪು ರಾಜ್ಯದ ಪರವಾಗಿಯೇ ಬರಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ ರಾಜೀನಾಮೆ ಕುರಿತು ಪ್ರಶ್ನಿಸಿದಾಗ ಅವರು ತುಂಬಾ ಹಿರಿಯರು. ರಾಜಕೀಯದಲ್ಲಿ ಪಳಗಿದ ವ್ಯಕ್ತಿ. ಅವರಿಗೆ ಏನು ಮಾಡಬೇಕೆನ್ನುವ ಅರಿವಿದೆ ಎಂದರು.

ಈ ಸಂದರ್ಭ ಶಾಸಕ ಸೋಮಶೇಖರ ಜೊತೆಗಿದ್ದರು.

Leave a Reply

comments

Related Articles

error: