ಮೈಸೂರು

ನಿವೇಶನ ವಂಚಿತರಿಂದ ಜು.3ರಂದು ಧರಣಿ

ಮೈಸೂರು.ಜು.1 : ನಿವೇಶನ ನೀಡುವುದಾಗಿ ವಂಚನೆ ಮಾಡಿರುವ ಮೈಸೂರು ಹೋಮ್ ಡೆವಲಪರ್ಸ್ ಪ್ರೈ.ಲಿ., ವ್ಯವಸ್ಥಾಪಕ ನಿರ್ದೇಶಕ ಸೈಯದ್ ನಿಜಾಂ ಆಲೀ ವಿರುದ್ಧ ಜು.3ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸುವುದಾಗಿ ಮೈಸೂರು ನಗರ ಮತ್ತು ಜಿಲ್ಲೆಯ ನಿವೇಶನಾಕಾಂಕ್ಷಿಗಳ ಮತ್ತು ನಿವೇಶನ ವಂಚಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ವೈ.ಗುರುಪ್ರಸಾದ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಯದ್ ನಿಜಾಂ ಆಲೀ ನಿವೇಶನ ನೀಡುವುದಾಗಿ 2 ಸಾವಿರ ಅಧಿಕ  ಜನರಿಂದ ಹಣ ವಸೂಲಿ ಮಾಡಿದ್ದು ಐದು ವರ್ಷ ಕಳೆದರು ಖಾತಾ ನೋಂದಣಿ ಮಾಡಿಸಿಕೊಟ್ಟಿಲ್ಲ, ಸಬೂಬು ಹೇಳುತ್ತಲೇ ಕಾಲ ಕಳೆಯುತ್ತಿರುವವರು ಹಲವು ಜನರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇವರ ವಂಚನೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ, ಹಲವರು ನ್ಯಾಯಾಲಯದ ಮೊರೆ ಹೋಗಿದ್ದು 173 ಬಾರಿ ವಾರೆಂಟ್, ಸಮನ್ಸ್ ಜಾರಿಗೊಂಡಿದ್ದರು ನ್ಯಾಯಾಲಯಕ್ಕೆ ಹಾಜರಾಗಿಲ್ಲ, ಆದ್ದರಿಂದ ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯಲು ನಿವೇಶನ ವಂಚಿತರು ಕುಟುಂಬ ಸಮೇತವಾಗಿ ಅಂದು ಬೆಳಿಗ್ಗೆ 10 ರಿಂದ ಧರಣಿ ನಡೆಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ. ಕೆ.ಎಲ್. ಕೃಷ್ಣ, ಮುರಳೀಧರ್ ಹಾಜರಿದ್ದರು (ವರದಿ : ಕೆ.ಎಂ.ಆರ್)

Leave a Reply

comments

Related Articles

error: