ಮೈಸೂರು

ಜು.9ರಂದು ಆರುಮ್ ಜ್ಯುವೆಲ್ಲರಿ ಶಾಖೆ ಉದ್ಘಾಟನೆ: ಕಾರ್ತಿಕ್ ಎನ್.ಗುಪ್ತ

ಮೈಸೂರು, ಜು.1: ಖ್ಯಾತ ಜ್ಯುಲೆಲ್ಲರಿ ಕಂಪನಿಗಳಲ್ಲಿ ಒಂದಾದ ಆರುಮ್ ತನ್ನ ನೂತನ ಶಾಖೆಯನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಆರಂಭಿಸುತ್ತಿದೆ ಎಂದು ಮಾಲೀಕ ಕಾರ್ತಿಕ್ ಎನ್.ಗುಪ್ತ ತಿಳಿಸಿದರು.
ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರುಮ್‌ನ ಬ್ರಾಂಡ್ ಉದ್ಘಾಟನೆಯನ್ನು ಜು.9ರಂದು ರ್‍ಯಾಡಿಸನ್ ಬ್ಲೂ ನಲ್ಲಿ ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿದೆ. 5.30ಕ್ಕೆ ಫ್ಯಾಷನ್ ಶೋ ಆಯೋಜಿಸಿದ್ದು ಖ್ಯಾತ ನಟಿ ಊರ್ವಶಿ ರೌಟೇಲಾ ಭಾಗವಹಿಸಲಿದ್ದಾರೆ. 7.30ಕ್ಕೆ ವಿಶೇಷ ಆಭರಣಗಳ ಪ್ರದರ್ಶನ ಆಯೋಜಿಸಲಾಗಿದೆ. ಮೈಸೂರಿನ ಜನತೆಗೆ ನೂತನ ಆಭರಣಗಳನ್ನು ಪರಿಚಯಿಸುವ ಉದ್ದೇಶದಿಂದ ಜ್ಯುವೆಲ್ಲರಿ ಶಾಖೆ ಆರಂಭಿಸಲಾಗುತ್ತಿದೆ. ದೇಶದಲ್ಲಿ ವಿವಿಧ ಭಾಗಗಳಲ್ಲಿ ನಮ್ಮ ಶಾಖೆಗಳಿದ್ದು ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನೂತನ ಶಾಖೆ ತೆರೆಯಲಾಗುತ್ತಿದೆ ಎಂದು ಹೇಳಿದರು.
ಆರುಮ್ ಬೇರೆ ಜ್ಯುವೆಲ್ಲರಿಗಳಿಗಿಂತ ಭಿನ್ನ. ನಮ್ಮಲ್ಲಿ ಒಬ್ಬರಿಗೆ ತಯಾರಿಸಿದ ಡಿಸೈನ್‌ನ್ನು ಮತ್ತೊಬ್ಬರಿಗೆ ತಯಾರಿಸುವುದಿಲ್ಲ. ಡಿಸೈನ್ ಆಯ್ಕೆ ಮಾಡಿ, ತಯಾರಿಸಿ ಅದು ಗ್ರಾಹಕರಿಗೆ ಇಷ್ಟವಾದ ಮೇಲಷ್ಟೇ ಮಾರಾಟ ಮಾಡಲಾಗುತ್ತದೆ. ನಮ್ಮಲ್ಲಿ ಲಭ್ಯವಿರುವ ಡಿಸೈನ್‌ಗಳು ವಿನೂತನವಾಗಿದ್ದು ಆಕರ್ಷಣೀಯವಾಗಿವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲವಾರು ಜ್ಯುವೆಲ್ಲರಿಗಳಿವೆ. ಆದರೆ ನಮ್ಮ ಆರುಮ್ ವಿಶೇಷವಾಗಿ ನಿಲ್ಲಲಿದ್ದು ಆಭರಣ ಪ್ರಿಯರನ್ನು ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮ್ಯಾನೇಜರ್ ರೂಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: