ಮನರಂಜನೆ

ಟಬು ಏಕಾಂಗಿತನಕ್ಕೆ ಅಜಯ್ ದೇವಗನ್ ಕಾರಣವಂತೆ!

ದೇಶ(ಮುಂಬೈ)ಜು.1:-  25 ವರ್ಷಗಳ ಬಳಿಕ ಬಾಲಿವುಡ್ ನಟಿ ಟಬು ತಾನು ಏಕಾಂಗಿಯಾಗಿ ಉಳಿದಿರುವುದರ ರಹಸ್ಯ ತೆರೆದಿಟ್ಟಿದ್ದಾಳೆ.

ಆ್ಯಕ್ಷನ್ ಫಿಲ್ಮ್ ಡೈರೆಕ್ಟರ್ ರೋಹಿತ್ ಶೆಟ್ಟಿ  ದೀಪಾವಳಿಗೆ ಗೋಲ್ ಮಾಲ್ ಅಗೇನ್ ಚಿತ್ರವನ್ನು ತೆರೆಗೆ ತರಲಿದ್ದು, ಅದರಲ್ಲಿ ಅಜಯ್ ದೇವಗನ್ ಮತ್ತು ಟಬು ರೋಮ್ಯಾನ್ಸ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 80-90ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ಟಬು 1994ರಲ್ಲಿ ಅಜಯ್ ದೇವಗನ್ ವಿಜಯಪಥ್ ಚಿತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದಳು. ಆದರೆ ಇತ್ತೀಚೆಗೆ ಸಂದರ್ಶನದಲ್ಲಿ ಬೆಚ್ಚಿ ಬೀಳುವ ಹೇಳಿಕೆಯೊಂದನ್ನು ಟಬು ನೀಡಿದ್ದಾಳಂತೆ. ಅಜಯ್ ದೇವಗನ್ ನಿಂದಾಗಿ ನಾನಿನ್ನು ಏಕಾಂಗಿಯಾಗಿದ್ದೇನೆ ಎಂದಿದ್ದಾಳಂತೆ.

ಅಜಯ್ ಮತ್ತು ನಾನು 25 ವರ್ಷಗಳಿಂದ ಪರಿಚಿತರು. ನನ್ನ ಕಸಿನ್ ಸಮೀರ್ ಆರ್ಯ ಮನೆಯ ಪಕ್ಕ ಅಜಯ್ ವಾಸಿಸುತ್ತಿದ್ದರು. ನನ್ನ ಮೇಲೆ ವಿಪರೀತ ಕಾಳಜಿ ವಹಿಸಿದ್ದರು. ಎಲ್ಲಿಯಾದರೂ ಹೋದರೆ ನನ್ನನ್ನು ಫಾಲೋ ಮಾಡುತ್ತಿದ್ದರು. ನನ್ನ ಜೊತೆ ಯಾವುದಾದರೂ ಹುಡುಗರು ಮಾತನಾಡಲು ಬಂದರೆ ಅವರಿಗೆ ಧಮ್ಕಿ ಹಾಕುತ್ತಿದ್ದರು. ತಕ್ಷಕ್, ಫಿತೂರ್, ದೃಶ್ಯಂ ನಲ್ಲಿ ಜೊತೆಯಾಗಿಯೇ ಕಾಣಿಸಿಕೊಂಡಿದ್ದೇವೆ ಎಂದಿದ್ದಾರೆ.

ಗೋಲ್ ಮಾಲ್ ಅಗೇನ್ ನಲ್ಲಿ ಅರ್ಷದ್ ವಾರಸಿ, ಪರಿಣಿತಿ ಛೋಪ್ರಾ, ಕುನಾಲ್ ಖೆಮೂ, ತುಷಾರ್ ಕಪೂರ್ ಕೂಡಾ ಮುಖ್ಯ ಭೂಮಿಕೆಯಲ್ಲಿದ್ದಾರಂತೆ. (ಎಸ್.ಎಚ್)

 

Leave a Reply

comments

Related Articles

error: