ಕರ್ನಾಟಕಪ್ರಮುಖ ಸುದ್ದಿ

ಚೈನ್ ಕಸಿದು ಪರಾರಿಯಾಗುತ್ತಿದ್ದ ಕಳ್ಳನನ್ನು ಬೆನ್ನಟ್ಟಿ ಹಿಡಿದ ಮಹಿಳೆ

ರಾಜ್ಯ(ಮಂಡ್ಯ)ಜು.1:-ಚೈನ್ ಕದ್ದು ಓಡುತ್ತಿದ್ದ ಕಳ್ಳನನ್ನು ಬೆನ್ನಟ್ಟಿದ ಮಹಿಳೆಯೋರ್ವರು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀರಂಗಪಟ್ಟಣ ಟೌನ್ ಗಂಜಾಮ್ ನ  ನಿಮಿಷಾಂಭ ದೇವಸ್ಥಾನದ ಬಳಿ ದೇವಸ್ಥಾನಕ್ಕೆ ಬಂದಿದ್ದ ದಂಪತಿಗಳಲ್ಲಿ ವಿಳಾಸ ಕೇಳುವ ನೆಪದಲ್ಲಿ ಚೈನ್ ಕದ್ದು ಪರಾರಿಯಾಗುತ್ತಿದ್ದ  ಕಳ್ಳನನ್ನು ಬೆಂಗಳೂರು ಮೂಲದ ದಿಟ್ಟ ಮಹಿಳೆ ಬೆನ್ನಟ್ಟಿ ಹಿಡಿದಿದ್ದಾರೆ.  ಬಂಧಿತನನ್ನು ಚಿನಕುರುಳಿಯ ರಾಜು ಎಂದು ಗುರುತಿಸಲಾಗಿದೆ. ಬೆಂಗಳೂರಿನ ನವ್ಯ ಕಳ್ಳನನ್ನು ಬೆನ್ನಟ್ಟಿ ಹಿಡಿದಿದ್ದು,ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ಥಳೀಯರು ಆರೋಪಿ ಸರಗಳನ್ನು ಬಂಧಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: