ಮೈಸೂರು

ಶ್ರೀಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಧಾರಾಮಹೋತ್ಸವ ಧಾರ್ಮಿಕ ಕೈಂಕರ್ಯ

ನಂಜನಗೂಡು,ಜು.1-ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿ ದೇವಿಯ ಗಿರಿಜಾ ಕಲ್ಯಾಣ ಮಹೋತ್ಸವದ‌ ಅಂಗವಾಗಿ ಶ್ರೀಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಕಾಶಿಯಾತ್ರೆ ಹಾಗೂ ಧಾರಾಮಹೋತ್ಸವ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಗಿರಿಜಾ ಕಲ್ಯಾಣ ಮಹೋತ್ಸವದ ಪ್ರಯುಕ್ತ ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಶ್ರೀಕಂಠೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಯದುವಂಶದ ಮಹಾರಾಜ ಕೊಡುಗೆಯಾಗಿ ನೀಡಿರುವ ಗಂಡು ಭೇರುಂಡ, ಟಿಪ್ಪು ಸುಲ್ತಾನ್ ಕೊಟ್ಟಿರುವ ವಜ್ರ ವೈಡೂರ್ಯ, ಶೃಂಗೇರಿ ಮಠದಿಂದ ಸಲ್ಲಿಸಿರುವ ಚಿನ್ನದ ಬಿಲ್ವ ಸರ ಸೇರಿದಂತೆ ಇತರ ಆಭರಣಗಳಿಂದ ಸಿಂಗಾರಗೊಳಿಸಲಾಗಿತ್ತು. ಹಲವು ಧಾರ್ಮಿಕ ಪೂಜೆಗಳು ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್, ಎಇಒ ಗಂಗಯ್ಯ ಸೇರಿದಂತೆ ಹಲವರು ಹಾಜರಿದ್ದರು. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: