ಕ್ರೀಡೆ

ಶಿಖರ್ ಧವನ್ ಪತ್ನಿ ಆಯೇಶಾ ಈಗ ಇನ್ ಸ್ಟಾಗ್ರಾಂ ಗೆ ಎಂಟ್ರಿ!

 ವೆಸ್ಟ್ ಇಂಡೀಸ್, ಜು.1: ಟೀಂ ಇಂಡಿಯಾದ ಆಟಗಾರ ಶಿಖರ್ ಧವನ್ ಪತ್ನಿ ಆಯೇಶಾ ಕೂಡ ಇನ್ ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ತಾಣದಲ್ಲಿ ಖಾತೆ ತೆರೆದ ಪತ್ನಿಯನ್ನು ಖುದ್ದು ಶಿಖರ್ ಧವನ್ ಸ್ವಾಗತಿಸಿದ್ದು ವಿಶೇಷ. ಯುವಿ ಪತ್ನಿ ಹೇಜಲ್ ಕೀಚ್ ಕೂಡ ಆಯೇಶಾರನ್ನು ಸ್ವಾಗತ ಮಾಡಿದ್ದಾರೆ.

ಪತ್ನಿ ಹಾಗೂ ಮಗನ ಫೋಟೋ ಅಪ್ ಲೋಡ್ ಮಾಡಿರುವ ಶಿಖರ್ ಧವನ್, ಬ್ಯೂಟಿಫುಲ್ ವೈಫ್ ಆಯೇಶಾಗೆ ಸ್ವಾಗತ. ಯಾವಾಗಲೂ ಪ್ರೀತಿ ಮತ್ತು ಬೆಂಬಲ ಇದ್ದೇ ಇದೆ ಎಂದು ಬರೆದುಕೊಂಡಿದ್ದಾರೆ. ಕೊನೆಗೂ ಆಯೇಶಾ ಇನ್ ಸ್ಟಾಗ್ರಾಮ್ ಗೆ ಬಂದಿದ್ದನ್ನು ನಂಬುವುದಕ್ಕೆ ಆಗುತ್ತಿಲ್ಲ ಎಂದು ಹೇಜಲ್ ಕೀಚ್  ಪ್ರತಿಕ್ರಿಯಿಸಿದ್ದಾರೆ.

ಸದ್ಯ 5 ಏಕದಿನ ಪಂದ್ಯಗಳ ಸರಣಿಗಾಗಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಗೆ ತೆರಳಿದೆ. ಧವನ್ ಪತ್ನಿ ಆಯೇಶಾ ಹಾಗೂ ಮಗ ಜೋರಾವರ್ ಕೂಡ ಕೆರಿಬಿಯನ್ ನಾಡಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: