ಕ್ರೀಡೆ

ದಾಂದಲೆ ಸೃಷ್ಟಿಸಿದ ರೆಸ್ಲರ್‍ಗಳಿಗೆ ಖಲಿಯಿಂದ ಧರ್ಮದೇಟು

ಅಖಾಡದೊಳಗೆ ಅಥವಾ ಹೊರಗೆ ‘ದಿ ಗ್ರೇಟ್ ಖಲಿ’ ಜತೆ ಕಾದಾಟಕ್ಕಿಳಿದರೆ ಏನಾಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ.

ತನ್ನ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ್ದ ವಿದೇಶಿ ರೆಸ್ಲರ್‍ಗಳಿಬ್ಬರಿಗೆ ಖಲಿ ರಾಡ್‍ನಿಂದ ಥಳಿಸಿ ಪಾಠ ಕಲಿಸಿದ್ದಾರೆ.

ಅ.8ರಂದು ಖಲಿ ರೆಸ್ಲಿಂಗ್ ಅಕಾಡೆಮಿ ಆಯೋಜಿಸಿದ್ದ ಕಾಂಟಿನೆಂಟಲ್ ರೆಸ್ಲಿಂಗ್ ಎಂಟರ್‍ಟೈನ್ಮೆಂಟ್‍ ಕಾರ್ಯಕ್ರಮ ನಡೆಯಲಿಲ್ಲ ಎಂದು ಆಕ್ರೋಶಗೊಂಡ ಬ್ರಾಡಿ ಸ್ಟೀಲ್ ಮತ್ತು ಇತರರು ಜಲಂಧರ್‍ನಲ್ಲಿರುವ ಖಲಿ ಅವರ ಅಕಾಡೆಮಿಗೆ ನುಗ್ಗಿ ದಾಂದಲೆ ನಡೆಸಿದ್ದರು. ಅಲ್ಲದೆ, ಖಲಿ ಸಹೋದರ ಸುರೆಂದರ್ ರಾಣಾ ಮತ್ತು ಶಿಷ್ಯರಿಗೆ ಥಳಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆ ರಾಡ್ ಹಿಡಿದು ಬ್ರಾಡಿ ತಂಗಿದ್ದ ಚಂಡೀಗಢದ ಹೋಟೆಲ್‍ಗೆ ನುಗ್ಗಿದ ಖಲಿ ಆತನಿಗೆ ಹಿಗ್ಗಾಮುಗ್ಗಾ ಭಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಸೃಷ್ಟಿಸಿದೆ. ಖಲಿಗೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.

ಅ.8ರ ಕಾರ್ಯಕ್ರಮ ನಡೆಸಲು ಪೊಲೀಸರ ಅನುಮತಿ ಸಿಕ್ಕಿರಲಿಲ್ಲ. ಹಾಗಾಗಿ ಮುಂದೂಡಿದ್ದೆವು. ಆದರೆ, ರೆಸ್ಲರ್‍ಗಳು ನನ್ನ ಅಕಾಡೆಮಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂದು ಖಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಖಲಿ ಮತ್ತು ಬ್ರಾಡಿ ಸ್ಟೀಲ್ ಮಧ್ಯೆ ಇದೇ ಮೊದಲ ಬಾರಿ ಗಲಾಟೆ ನಡೆದಿರುವುದಲ್ಲ. ಕಳೆದ ಫೆಬ್ರವರಿಯಲ್ಲಿ ಬ್ರಾಡಿ ತನ್ನ ಸಂಗಡಿಗರೊಂದಿಗೆ ರಿಂಗ್‍ ಒಳಗೆ ಖಲಿ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರ ಗಾಯಗೊಂಡಿದ್ದ ಖಲಿ ಎರಡು ದಿನ ಆಸ್ಪತ್ರೆಯಲ್ಲಿದ್ದರು.

Leave a Reply

comments

Related Articles

error: