ಕರ್ನಾಟಕ

ವಿಜೃಂಭಣೆಯಿಂದ ನಡೆದ ಕುರುಬನಕಟ್ಟೆ ಸಿದ್ದಪ್ಪಾಜಿ ಕಂಡಾಯೋತ್ಸವ

ರಾಜ್ಯ(ಚಾಮರಾಜನಗರ)ಜು.1:- ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಆಷಾಢ ಮಾಸದ ಮೊದಲನೇ ಶುಕ್ರವಾರದಂದು ಕುರುಬನಕಟ್ಟೆ ಸಿದ್ದಪ್ಪಾಜಿ ಕಂಡಾಯೋತ್ಸವವು ವಿಜೃಂಭಣೆಯಿಂದ ಜರುಗಿತು.
ಸಿದ್ದಯ್ಯನಪುರ ಗ್ರಾಮದ ಕುರುಬರ ಬೀದಿಯ ಕುಲಸ್ಥರಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಕರೆಸಿದ್ದ ಕಂಡಾಯಗಳನ್ನು ಶ್ರೀ ಬ್ರಮ್ಮೇಶ್ವರ ಸ್ವಾಮಿ ದೇವಸ್ಥಾನದಿಂದ ಹೂ-ಹೊಂಬಾಳೆ ಧರಿಸಿ ಗ್ರಾಮದಲ್ಲಿ ಮಂಗಳವಾದ್ಯ ಹಾಗೂ ತಮಟೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಕಣ್ಣೂರು ಬಸವ, ಬಸವೇಶ್ವರ ಹಾಗೂ ಬ್ರಮ್ಮೇಶ್ವರ ಸತ್ತಿಗೆ, ಕುರುಬನಕಟ್ಟೆ ಸಿದ್ದಪ್ಪಾಜಿ ಕಂಡಾಯಗಳನ್ನು ಹೊತ್ತು ಗ್ರಾಮದ ಎಲ್ಲಾ ಬಡಾವಣಿಗೆ ಮೆರವಣಿಗೆ ನಡೆಸಿ ಲಿಂಗನಗೂಡು ದೇವಾಲಯದಲ್ಲಿ ಇರಿಸಲಾಯಿತು. ಕಂಡಾಯ ಉತ್ಸವದ ಅಂಗವಾಗಿ ಗ್ರಾಮದ ಬೀದಿಗಳಿಗೆ ರಂಗೋಲಿ ಬಿಟ್ಟು ಹಸಿರು ತೋರಣ, ವಿದ್ಯುತ್‍ದೀಪಾಲಂಕರ ಹಾಕಿ ಹಬ್ಬದ ವಾತಾವಾರಣದಂತೆ ಸಡಗರದಿಂದ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕುರುಬರ ಸಂಘದ ನಿರ್ದೇಶಕ ನಂಜೇಗೌಡ, ಯಜಮಾನುರುಗಳಾದ ಸಿ.ಹುಚ್ಚೇಗೌಡ, ವೆಂಕಟಮಾದೇಘೌಡ, ಸಿದ್ದೇಗೌಡ, ಚಿಕ್ಕಮಾದೇಗೌಡ, ಮಲ್ಲುಗೌಡ, ಚಿಕ್ಕಬಸವೇಗೌಡ, ಗ್ರಾ.ಪಂ ಅಧ್ಯಕ್ಷೆ ಶಶಿಕುಮಾರಿ, ಸದಸ್ಯ ಉಮೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Reply

comments

Related Articles

error: