ಸುದ್ದಿ ಸಂಕ್ಷಿಪ್ತ

ಕೌಶಲ್ಯಾಭಿವೃದ್ಧಿ ತರಬೇತಿ ಅರ್ಜಿ ಆಹ್ವಾನ

ಮೈಸೂರು,ಜು.1-ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ   10ನೇ ತರಗತಿ ವಿದ್ಯಾರ್ಹತೆ ಹೊಂದಿರುವ 18 ರಿಂದ 35 ವರ್ಷ ವಯೋಮಿತಿಯೊಳಗಿನ ಅರ್ಹ ಹಿಂದುಳಿದ ಮಡಿವಾಳ, ಸವಿತಾ ಸಮಾಜ, ಕುಂಬಾರ, ತಿಗಳ ಸಮಾಜ ವರ್ಗದವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.

ಆ್ಯನಿಮೆಷನ್, ಆಟೋಕ್ಯಾಡ್, ಬ್ಯೂಟಿಷಿಯನ್, ಸೌಂಡ್‍ಇಂಜಿನಿಯರಿಂಗ್, ಡಿ.ಟಿ.ಪಿ. ತರಬೇತಿ, ವಾಹನ ಚಾಲನ ತರಬೇತಿ, ರೆಡಿಮೇಡ್ ಗಾರ್ಮೆಂಟ್ಸ್ ತರಬೇತಿ, ಕುಂಬಾರಿಕೆ ಕಲಾತ್ಮಕ ಉತ್ಪನ್ನಗಳ ತಯಾರಿಕೆ ತರಬೇತಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಜು.31 ಕೊನೆಯ ದಿನ.  ಹೆಚ್ಚಿನ ಮಾಹಿತಿಗೆ ದೂ.ಸಂ. 0821-2341194 ಸಂಪರ್ಕಿಸಬಹುದು. (ವರದಿ-ಎಂ.ಎನ್)

Leave a Reply

comments

Related Articles

error: