ನಮ್ಮೂರುಮೈಸೂರು

ಗಾಣಿಗ ಸಮಾಜದ ಪಿ.ಎಚ್.ಡಿ.ಪದವಿ ಪುರಸ್ಕೃತರಿಗೆ ಸನ್ಮಾನ

ನಗರದ ಕನ್ನಡ ಸಾಹಿತ್ಯ ಕಲಾಕೂಟ, ಶ್ರೀರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡ ಹಾಗೂ ಗಾಣಿಗರ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ಗಾಣಿಗ ಸಮಾಜದ ಪಿ.ಹೆಚ್.ಡಿ.ಪದವಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ತಿಳಿಸಿದರು.

ಅವರು ನಗರದಲ್ಲಿ ಅ.13ರಂದು ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸಮಾರಂಭವನ್ನು ಅ.14ರ ಸಂಜೆ 5 ಗಂಟೆಗೆ ನಗರದ ಜೆ.ಎಸ್.ಎಸ್. ಆಸ್ಪತ್ರೆಯ ಆವರಣದ ಶ್ರೀರಾಜೇಂದ್ರ ಭವನಲ್ಲಿ ಆಯೋಜಿಸಿಲಾಗಿದೆ. ಅಲ್ಪಸಂಖ್ಯಾತ, ಹಿಂದುಳಿದ ವರ್ಗವಾದ ಗಾಣಿಗರ ಸಮಾಜದ ಬಡತನದಿಂದ ಬಂದಂತಹ ಡಾ.ಕೆ.ಎಸ್.ರಘುನಂದನ್ ಹಾಗೂ ಡಾ.ಬಿ.ಎಂ.ಚೇತನ್ ಕುಮಾರ್ ಅವರುಗಳನ್ನು ಅಭಿನಂದಸಿ ಮುಂಬರುವ ಸಮಾಜದ ಯುವ ಸಮೂಹಕ್ಕೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹಿಸಲು ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ಹಿರಿಯ ವಿದ್ವಾಂಸ ಪ್ರೊ.ಮಲೆಯೂರು ಗುರುಸ್ವಾಮಿ ಉದ್ಘಾಟಿಸುವರು. ಮಾಜಿ ಉಪಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್ ಪ್ರತಿಭಾವಂತರಿಗೆ ಅಭಿನಂದಿಸುವರು.ಮೈಸೂರು ವಿವಿಯ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಮೈಸೂರು ವಿವಿಯ ಡಾ.ಎಸ್.ಬಸವರಾಜಪ್ಪ, ಡಾ.ಎಸ್.ಹೆಚ್.ನಾಗೇಂದ್ರಸ್ವಾಮಿ, ಶ್ರೀರಾಜೇಶ್ವರಿ ವಸ್ತ್ರಾಲಂಕಾರ, ರಂಗತಂಡದ ಬಿ.ಎಂ.ರಾಮಚಂದ್ರ ಹಾಗೂ ಗಾಣಿಗರ ಸಂಘದ ಅಧ್ಯಕ್ಷ ಹೆಚ್.ಗಂಗಾಧರ್ ಉಪಸ್ಥಿತರಿವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಎಂ.ರಾಮಚಂದ್ರ, ಹೆಚ್.ಗಂಗಾಧರ್, ಹಾಗೂ ಡಾ.ಎಸ್.ಹೆಚ್.ನಾಗೇಂದ್ರಸ್ವಾಮಿ ಹಾಜರಿದ್ದರು.

Leave a Reply

comments

Related Articles

error: