ಕರ್ನಾಟಕ

ಮುಕ್ಕೋಡ್ಲು ಗ್ರಾಮಸ್ಥರಿಂದ ವೀಣಾಅಚ್ಚಯ್ಯರಿಗೆ ಸನ್ಮಾನ

ರಾಜ್ಯ(ಮಡಿಕೇರಿ) ಜು.1 :-ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮದ ಕಾಟೋಳಪ್ಪ ದೇವಾಲಯದ ಅಭಿವೃದ್ಧಿಗೆ ಸಹಕರಿಸಿದ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರನ್ನು ಸ್ಥಳೀಯ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ನಗರದ ಕೋಟೆ ಆವರಣದಲ್ಲಿರುವ ವಿಧಾನ ಪರಿಷತ್ ಸದಸ್ಯರ ಕಛೇರಿಯಲ್ಲಿ ಸನ್ಮಾನಿಸಿದ ಗ್ರಾಮಸ್ಥರು, ಬೃಹತ್ ಹೂವಿನ ಹಾರದೊಂದಿಗೆ ಒಡಿಕತ್ತಿ ನೀಡಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಗ್ರಾಮದ ಮುಖಂಡರಾದ ಮನುಮುದ್ದಪ್ಪ, ಮುಕ್ಕೋಡ್ಲು ಗ್ರಾಮದಲ್ಲಿ ಕಳೆದ 4-5 ವರ್ಷಗಳ ಹಿಂದೆ ಶ್ರೀ ಕಾಟೋಳಪ್ಪ ದೇವಾಲಯಕ್ಕೆ ಮರ ಬಿದ್ದು ದೇವಾಲಯಕ್ಕೆ ಹಾನಿಯುಂಟಾಗಿತ್ತು. ಇದರಿಂದ ಗ್ರಾಮಸ್ಥರ ನೆಮ್ಮದಿಯೂ ಹಾಳಾಗಿತ್ತು. ಇದೀಗ ವೀಣಾ ಅಚ್ಚಯ್ಯ ಅವರು ವಿಧಾನ ಪರಿಷತ್ ಸದಸ್ಯರಾದ ಬಳಿಕ ದೇವಾಲಯದ ಪುನರ್ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಿದ್ದಾರೆ. ಈ ಹಿನ್ನೆಲೆ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭ ಗ್ರಾಮಸ್ಥರು ಗ್ರಾಮದ ರಸ್ತೆ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯರು, ರಸ್ತೆ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಗ್ರಾಮದ ಪ್ರಮುಖರಾದ ಕನ್ನಿಕಂಡ ಶ್ಯಾಮ್, ಕಾಳಚಂಡ ಅಪ್ಪಣ್ಣ ಸೇರಿದಂತೆ ಅನೇಕರು ಈ ಸಂದರ್ಭ ಹಾಜರಿದ್ದರು.(ಕೆಸಿಐ,ಎಸ್.ಎಚ್)

Leave a Reply

comments

Related Articles

error: