ಕರ್ನಾಟಕಪ್ರಮುಖ ಸುದ್ದಿ

6ನೇ ವೇತನ ಆಯೋಗದ ಕಚೇರಿ ಸ್ಥಳಾಂತರ

ಬೆಂಗಳೂರು, ಜುಲೈ 2 : ರಾಜ್ಯ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ 6ನೇ ವೇತನ ಆಯೋಗದ ಕಚೇರಿಯು ಕಾಫಿ ಮಂಡಳಿಯ ಮೊದಲ ಮಹಡಿಗೆ ಸ್ಥಳಾಂತರ ಗೊಂಡಿದೆ.

ಆಯೋಗದ ಅಧ್ಯಕ್ಷ ಶ್ರೀ ಎಂ.ಆರ್. ಶ್ರೀನಿವಾಸಮೂರ್ತಿ, ಸದಸ್ಯರಾದ ಮಹಮದ್ ಸನಾವುಲ್ಲಾ ಹಾಗೂ ಆರ್.ಎಸ್. ಪೋಂಡೆ ಹಾಗೂ ಆಯೋಗದ ಸದಸ್ಯ ಕಾರ್ಯದರ್ಶಿ ಮಂಜುನಾಥ ನಾಯಕ್ ಅವರು ಶುಕ್ರವಾರ ಕಾಫಿ ಮಂಡಳಿಯ ಕಚೇರಿಗೆ ಆಗಮಿಸಿ ತಮ್ಮ ಕೆಲಸ ಕಾರ್ಯಗಳನ್ನು ಮುಂದುವರೆಸಿದರು. ಇದಕ್ಕೂ ಮುನ್ನ ಆಯೋಗವು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿತ್ತು.

ಆಯೋಗದ ಕಚೇರಿ ವಿಳಾಸ : ಸದಸ್ಯ ಕಾರ್ಯದರ್ಶಿಗಳು, ಆರನೇ ವೇತನ ಆಯೋಗ, ಎರಡನೇ ಮಹಡಿ, ಕಾಫಿ ಮಂಡಳಿ, ಅಂಬೇಡ್ಕರ್ ವೀದಿ, ಬೆಂಗಳೂರು.

-ಎನ್.ಬಿ.

Leave a Reply

comments

Related Articles

error: