ಕರ್ನಾಟಕ

ಹಿಂದುಳಿದ ವರ್ಗದವರಿಂದ ವಿವಿಧ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ,  ಜುಲೈ 2 : ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ವಿವಿಧ ಸಾಲ ಯೋಜನೆಗಳ ಸೌಲಭ್ಯವನ್ನು ನೀಡಲಿದ್ದು ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಂದ ಅರ್ಜಿ ಆಹ್ವಾನಿಸಿದೆ.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ ಸರಕು ಸಾಗಾಣಿಕೆ ವಾಹನ ಕೊಳ್ಳಲು ಸಜಾಯಧನ, ಗಂಗಾಕಲ್ಯಾಣ, ವೈಯಕ್ತಿಕ ನೀರಾವರಿ ಯೋಜನೆ, ವೃತ್ತಿ ತರಬೇತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಬೈರಾಗಿ, (ಬಾವ), ಬಾಲ ಸಂತೋಷಿ-ಜೋಷಿ, ಬಾಜಿಗರ್, ಭರಡಿ, ಬುಡಬುಡಿಕಿ ಜೋಶಿ ಗೋಂಧಳಿ, ಚಾರ, ಚಿತ್ರಕಥಿ ಜೋಷಿ, ಧೋಲಿ, ಢವೇರಿ, ದೊಂಬರಿ, ಘಿಸಾಡಿ, ಗರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲ್ಕರಿ, ಕೋಲ್ಹಟಿ, ನಂದಿವಾಲ ಜೋಷಿ ಗೋಂದಳಿ, ಪುಲ್‍ಮಾಲ್ಲಿ, ನಾಥಪಂಥಿ ಡೌರಿ ಗೋಸಾವಿ, ನಿರ್ಶಿಕಾರಿ, ಪಾಂಗ್ಯುಯಲ್, ಜೋಷಿ (ಸಾದ ಜೋಷಿ), ಸಾನ್ಸಿಯ, ಸರಾನಿಯ, ತಿರುಮಲಿ, ವಾಯ್ಡು, ವಾಸುದೇವ್, ವಾಡಿ, ವಾಗ್ರಿ, ವಿರ್, ಬಜನಿಯ, ಶಿಕ್ಕಲಿಗರ್, ಗೊಲ್ಲ, ಕಿಲ್ಲಿಕ್ಯಾತಸ್, ಸರೋಡಿ, ದುರ್ಗ ಮುರ್ಗ (ಬುರ್‍ಬುರ್‍ಚ), ಹಾವಗಾರ್ (ಹಾವಾಡಿಗಾರ್), ಪಿಚಗುಂಟಲ, ಮಸಣಿಯ ಯೋಗಿ, (ಬೆಸ್ತರ್)ಬುಂಡಬೆಸ್ತ, ಕಟಬು, ದರ್ವೆಶ್, ಕಾಶಿ ಕಪಾಡಿ, ದೊಂಬಿದಾಸ ಮತ್ತು ಬೈಲ್‍ಪತರ್ ಅರ್ಹರು.

ಯೋಜನೆ ಪೈಕಿ ಶೇ. 50ರಷ್ಟು ಗೊಲ್ಲ ಸಮುದಾಯಕ್ಕೆ ಹಾಗೂ ಶೇ. 50ರಷ್ಟು ಇತರೆ ಅಲೆಮಾರಿ, ಅರೆಅಲೆಮಾರಿ ಜನಾಂಗಕ್ಕೆ ಸೌಲಭ್ಯ ಒದಗಿಸಲಾಗುವುದು. ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲ್ಲಿ ಜುಲೈ 8ರ ಒಳಗೆ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಜುಲೈ 15 ಕಡೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ ವೆಬ್‍ಸೈಟ್ www.karnataka.gov.in/dbcde ನೋಡುವಂತೆ ಪ್ರಕಟಣೆ ತಿಳಿಸಿದೆ.

-ಎನ್.ಬಿ.

Leave a Reply

comments

Related Articles

error: