ಕರ್ನಾಟಕ

ಪ್ರೆಸ್ ಕ್ಲಬ್ ಚುನಾವಣೆ : ಮೊದಲ ದಿನ 12 ನಾಮಪತ್ರ ಸಲ್ಲಿಕೆ

ರಾಜ್ಯ(ಮಡಿಕೇರಿ) ಜು.2 :- ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕರ ಸ್ಥಾನಕ್ಕೆ ಜು.9ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಭಾನುವಾರದಿಂದ ಆರಂಭವಾಗಿದೆ. ಮೊದಲ ದಿನ 12 ನಾಮಪತ್ರ ಸಲ್ಲಿಕೆಯಾಗಿದೆ.

ಅಜ್ಜಮಾಡ ರಮೇಶ್ ಕುಟ್ಟಪ್ಪ, ರೆಜಿತ್ ಕುಮಾರ್, ಕಿಶೋರ್ ರೈ ಕತ್ತಲೆಕಾಡು, ಎಂ.ಎನ್.ನಾಸಿರ್, ಅಂಚೆಮನೆ ಸುಧಿಕುಮಾರ್, ಬಿ.ಎಸ್. ಸತ್ಯಮೂರ್ತಿ, ತೇಜಸ್ ಪಾಪಯ್ಯ, ಆರ್.ಸುಬ್ರಹ್ಮಣಿ, ಕೆ.ಬಿ.ಮಂಜುನಾಥ್, ವಿಘ್ನೇಶ್ ಎಂ. ಭೂತನಕಾಡು, ಎ.ಎಸ್.ಮುಸ್ತಫಾ, ಎಂ.ಎ. ಅಜೀಜ್  ಮೊದಲ ದಿನ ನಾಮಪತ್ರ ಸಲ್ಲಿಸಿದವರು. ಜು. 4ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. 5ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 9ರಂದು ಚುನಾವಣೆ ನಡೆಯಲಿದೆ. ನಿವೃತ್ತ ಉಪ ತಹಸೀಲ್ದಾರ್ ಕೆದಂಬಾಡಿ ರಾಘವಯ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: