ಕರ್ನಾಟಕ

ತುಂಗಭದ್ರ ನದಿಯಲ್ಲಿ ಕಾಲುಜಾರಿ ಬಿದ್ದು ಯುವಕ ಸಾವು

ರಾಜ್ಯ, (ಬಳ್ಳಾರಿ) ಜು.3: ತುಂಗಭದ್ರ  ನದಿಯಲ್ಲಿ ಕಾಲುಜಾರಿ ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಹೂವಿನ ಹಡಗಲಿ ತಾಲೂಕಿನ ಮೈಲಾರದ ಬಳಿ ನಡೆದಿದೆ.

ಸಂಜಯ್ ಮೃತ ದುರ್ದೈವಿ. ಈತ ಬೆಂಗಳೂರಿನ ಕೆ.ಎಲ್.ಇ.ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿ.ಯು.ಸಿ.ಓದುತ್ತಿದ್ದ. ತನ್ನ ತಂದೆ ಎ.ಜಿ.ಜಯಣ್ಣ  ಹಾಗೂ ತಾಯಿ ಗೀತಾರೊಂದಿಗೆ  ಮೈಲಾರ ದೇವಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ. ದಂಪತಿಗೆ ಒಬ್ಬನೇ ಮಗನಾಗಿದ್ದ ಎಂದು ತಿಳಿದು ಬಂದಿದೆ. (ವರದಿ: ಎಸ್. ಎನ್, ಎಲ್.ಜಿ)

 

Leave a Reply

comments

Related Articles

error: