ಮೈಸೂರು

ಮರಡಿಯೂರಿನಲ್ಲಿ ಹೆಚ್ಚಿದ ಚಿರತೆ ಕಾಟ

ಪಿರಿಯಾಪಟ್ಟಣದ ಮರಡಿಯೂರು ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಚಿರತೆಯು ಆಗಾಗ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ. ಹರೀಶ್ ಯಾನೆ ಉಲ್ಲಾಸ್ ಖಾನ್ ಎಂಬುವರಿಗೆ ಸೇರಿದ ತೋಟಕ್ಕೆ ದಾಳಿ ಮಾಡಿದ ಚಿರತೆಯು ಎರಡು ಆಡುಗಳನ್ನು ಬಲಿ ತೆಗೆದುಕೊಂಡಿದೆ.

ಚಿರತೆ ದಾಳಿ ನಡೆದಿರುವುದು ಇದೇ ಮೊದಲೇನಲ್ಲ. ದೊಡ್ಡಹೊನ್ನೂರು ಮತ್ತು ಚಿಕ್ಕಹೊನ್ನೂರು ಗ್ರಾಮಗಳಲ್ಲಿ ಕೆಲ ವಾರಗಳ ಹಿಂದೆ ಚಿರತೆ ದಾಳಿ ನಡೆದಿತ್ತು ಎನ್ನಲಾಗಿದೆ. ಗ್ರಾಮದಲ್ಲಿ ಚಿರತೆ ಓಡಾಟ ನಡೆಸುತ್ತಿರುವುದರಿಂದ ಜನರು ಕತ್ತಲಾಗುವ ಮುಂಚೆ ಮನೆ ಸೇರುವಂತೆ ಸೂಚಿಸಲಾಗಿದೆ.

ಸಾಕು ಪ್ರಾಣಿಗಳ ಮೇಲೂ ಚಿರತೆ ದಾಳಿ ನಡೆಸುತ್ತಿದೆ. ಅದನ್ನು ಹಿಡಿಯಲು ಕಾರ್ಯಾಚರಣೆ ನಡೆಸುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

Leave a Reply

comments

Related Articles

error: