ಕರ್ನಾಟಕಪ್ರಮುಖ ಸುದ್ದಿಮೈಸೂರು

ಕಬಿನಿ ನಾಲೆಗೆ ಉರುಳಿದ ಕಾರು : ಇಬ್ಬರು ವಿದ್ಯಾರ್ಥಿಗಳ ಸಾವು

ಚಲಿಸುತ್ತಿರುವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಬಿನಿ ಜಲಾಶಯಕ್ಕೆ ಉರುಳಿಬಿದ್ದಿದ್ದು, ಕಾರಿನೊಳಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಚಾಮರಾಜನಗರದ ಆಲ್ದೂರು ಬಳಿ ನಡೆದಿದೆ.

ಕಾರು ಮೈಸೂರಿನಿಂದ ಚಾಮರಾಜನಗರದ ಕಡೆ ತೆರಳುತ್ತಿದ್ದು ಅದರಲ್ಲಿ ಮೂವರು ವಿದ್ಯಾರ್ಥಿಗಳು, ಚಾಲಕ ಸೇರಿ ಒಟ್ಟು ನಾಲ್ಕು ಮಂದಿ ಚಲಿಸುತ್ತಿದ್ದರು ಎನ್ನಲಾಗಿದೆ. ಮೃತರನ್ನು ಉಮ್ಮತ್ತೂರಿನ ಏಕಲವ್ಯ ತಾಂತ್ರಿಕ ವಿದ್ಯಾನಿಲಯದ ವಿದ್ಯಾರ್ಥಿಗಳಾದ  ಮೈಸೂರಿನ ತಿಲಕನಗರದ ಎನ್.ಎಚ್.ದರ್ಶನ್ ಹಾಗೂ ಚಾಮುಂಡಿಬೆಟ್ಟದ ಜೆ.ಕಾರ್ತಿಕ್ ಎಂದು ಗುರುತಿಸಲಾಗಿದೆ. ಮತ್ತೋರ್ವ ವಿದ್ಯಾರ್ಥಿ ವಿಜಯನಗರದ ಎಂ.ಎಸ್.ದರ್ಶನ್  ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿcarದೆ. ಕುದೇರು  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: