ಮೈಸೂರು

ಮೈಸೂರಿನ ಕಾವೇರಿ ನದಿ ಈಗ ಗಂಗಾ ನದಿ!

ತಲಕಾಡು,ಜು.3-ಮೈಸೂರಿನ ಕಾವೇರಿ ನದಿ ಈಗ ಗಂಗಾ ನದಿಯಾಗಿದೆ. ಹೌದು, ಗಂಗಾ ನದಿ ತೀರದಲ್ಲಿ ಹೆಣ ಸುಡುವಂತೆ ತಲಕಾಡಿನ ಕಾವೇರಿ ನದಿ ತೀರದಲ್ಲೂ ಹೆಣ ಸುಡುತ್ತಿರುವುದು ಬೆಳಕಿಗೆ ಬಂದಿದೆ.

ವಾರಾಂತ್ಯದಂದು ತಲಕಾಡಿಗೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಪ್ರವಾಸಿಗರೇ ತಲಕಾಡಿನ ನದಿ ತೀರದಲ್ಲಿ ಹೆಣ ಸುಡುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಇದರಿಂದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗಿದೆ.

ನದಿ ತೀರದಲ್ಲಿ ಕಿಡಿಗೇಡಿಗಳು ಹೆಣಸುಡುತ್ತಿದ್ದರೂ ತಲಕಾಡು ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಜಿಲ್ಲಾಡಳಿತದವರು ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪ್ರವಾಸಿ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂಬುದು ಪ್ರವಾಸಿಗರ ಮನವಿ. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: