ಪ್ರಮುಖ ಸುದ್ದಿ

ಭಾರತದ ಯಾವ ಭಾಗದ ಮೇಲಾದರೂ ದಾಳಿ ಮಾಡಬಲ್ಲೆ: ಸೈಯದ್ ಸಲಾಹುದ್ದೀನ್

ಪ್ರಮುಖ ಸುದ್ದಿ, ನವದೆಹಲಿ, ಜು.3: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ನ್ನು ಅಮೆರಿಕಾ ಜಾಗತಿಕ ಉಗ್ರ ಎಂದು ಘೋಷಿಸಿದ ಬಳಿಕ ಭಾರತ ಮೇಲೆ ವಿಷ ಕಾರುತ್ತಿರುವ ಸಹಾಹುದ್ದೀನ್ ಭಾರತದ ಯಾವ ಭಾಗದ ಮೇಲಾದರೂ ದಾಳಿ ಮಾಡುವ ಸಾಮರ್ಥ್ಯ ನಮಗಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾನೆ.
ಮೋದಿ ಅಮೆರಿಕಾ ಪ್ರವಾಸದ ವೇಳೆ ಅಲ್ಲಿನ ಸರ್ಕಾರ ಸಲಾಹುದ್ದೀನ್‌ನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಇದರಿಂದ ಭಾರತದ ಮೇಲೆ ದ್ವೇಷ ಸಾಧಿಸುತ್ತಿರುವ ಸಲಾಹುದ್ದೀನ್ ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತದ ಮೇಲೆ ಯಾವಾಗ ಹಾಗೂ ಯಾವುದೇ ಭಾಗದ ಮೇಲೆ ಬೇಕಾದರೂ ನಾವು ದಾಳಿ ನಡೆಸಬಲ್ಲೆವು ಎಂದು ನೇರವಾಗಿ ಬೆದರಿಕೆ ಹಾಕಿದ್ದಾನೆ.
ನಾನು ಭಾರತದಲ್ಲಿ ಹಲವಾರು ಭಯೋತ್ಪಾದಕ ಕೃತ್ಯಗಳನ್ನು ನಡೆಸಿzನೆ. ನನ್ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಮೂರ್ಖ. ಭಾರತದಿಂದ ಕಾಶ್ಮೀರವನ್ನು ವಿಮೋಚನೆಗೊಳಿಸುವವರೆಗೂ ನಮ್ಮ ಹೋರಾಟ ಅಂತ್ಯಗೊಳ್ಳುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾನೆ. (ವರದಿ ಬಿ.ಎಂ)

Leave a Reply

comments

Related Articles

error: