ಮನರಂಜನೆ

ನಟಿ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೋ ಇರುವ ಮೆಮೊರಿ ಕಾರ್ಡ್ ಮತ್ತೊಬ್ಬ ನಟಿಯ ಬಳಿ?

ತಿರುವನಂತಪುರಂ,ಜು.3-ಮಲಯಾಳಂ ನಟಿಯ ಲೈಂಗಿಕ ದೌರ್ಜನ್ಯದ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ನಟಿಯ ಮೇಲಾಗಿದ್ದ ಲೈಂಗಿಕ ದೌರ್ಜನ್ಯವನ್ನು ಚಿತ್ರೀಕರಿಸಿರುವ ಮೆಮೊರಿ ಕಾರ್ಡ್ ಯಾರ ಬಳಿ ಇದೆ ಎಂಬುದರ ಬಗ್ಗೆ ಮಾಹಿತಿ ದೊರೆತಿದೆ. ಪ್ರಕರಣ ಪ್ರಮುಖ ಆರೋಪಿ ಪಲ್ಸರ್ ಸುನಿ ಲೈಂಗಿಕ ದೌರ್ಜನ್ಯದ ವಿಡಿಯೋ ಇರುವ ಮೆಮೊರಿ ಕಾರ್ಡ್ ಮಲಯಾಳಂನ ಮತ್ತೊಬ್ಬ ಖ್ಯಾತ ನಟಿ ಕಾವ್ಯಾ ಮಾಧವನ್ ಅವರಿಗೆ ಒಪ್ಪಿಸಿದ್ದೇನೆ ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಕಾವ್ಯಾ ಮಾಧವನ್ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ನಟ ದಿಲೀಪ್ ಅವರ ಪತ್ನಿ.

ಹೀಗಾಗಿ ಪೊಲೀಸರು ಕಾವ್ಯಾ ಮಾಧವನ್ ಅವರಿಗೆ ಸೇರಿದ ಬಟ್ಟೆ ಮಳಿಗೆ ಮೇಲೆ ದಾಳಿ ನಡೆಸಿದ್ದು, ವಿಡಿಯೋ ಇರುವ ಮೆಮೊರಿ ಕಾರ್ಡ್ ಸಿಕ್ಕಿದೆಯೇ? ಇಲ್ಲವೇ? ಎಂಬುದನ್ನು ಬಹಿರಂಗ ಪಡಿಸಿಲ್ಲ.

ವಿಡಿಯೋ ಇರುವ ಮೆಮೊರಿ ಕಾರ್ಡನ್ನು ಕಕ್ಕನಾಡ್ ನಲ್ಲಿರುವ ಇ-ಕಾಮರ್ಸ್ ಅಂಗಡಿಗೆ ತಲುಪಿಸಿರುವುದಾಗಿ ಪಲ್ಸರ್ ಸುನಿ ನಟ ದಿಲೀಪ್ ಅವರಿಗೆ ಪತ್ರ ಬರೆದಿದ್ದ. ಆ ಪತ್ರದಲ್ಲಿ ತಾನು ಕಕ್ಕನಾಡ್ ನಲ್ಲಿರುವ ಅಂಗಡಿಗೆ ಎರಡು ಬಾರಿ ಹೋಗಿದ್ದಾಗಿ ತಿಳಿಸಿದ್ದಾನೆ. ಆ ಅಂಗಡಿ ಕಾವ್ಯಾ ಮಾಧವನ್ ಅವರಿಗೆ ಸೇರಿದ ಅಂಗಡಿಯಾಗಿದೆ. (ವರದಿ-ಎಂ.ಎನ್)

 

Leave a Reply

comments

Related Articles

error: