ಮನರಂಜನೆ

ಬಾಯ್ ಫ್ರೆಂಡ್ ಜೊತೆ ಸಿಕ್ಕಿ ಬಿದ್ದ ಬೆಡಗಿ..!

ದೇಶ,(ನವದೆಹಲಿ)ಜು.3:- ಲಂಡನ್ ನಲ್ಲಿ ತನ್ನ ಬಾಯ್ ಫ್ರೆಂಡ್ ಜೊತೆ ಸುತ್ತಾಡುವಾಗ ಬಾಲಿವುಡ್ ನಟಿ ಜೂಹಿಚಾವ್ಲಾ ಕಣ್ಣಿಗೆ ಈಕೆ ಬಿದ್ದಿದ್ದಾಳೆ, ತುಸು ಗಾಬರಿಗೊಂಡಿದ್ದಾಳೆ. ಆಕೆ ಬೇರಾರೂ ಅಲ್ಲ  ಪ್ರೇಮ್ ರತನ್ ಧನ್ ಪಾಯೋ ಮೂಲಕ ಪಡ್ಡೆ ಹುಡುಗರ ಮನ ಕದ್ದ ಸೋನಮ್ ಕಪೂರ್.

ಸೋನಮ್ ಕಪೂರ್ ನ್ನು ಭೇಟಿಯಾದ ಜೂಹಿಚಾವ್ಲಾ ಟ್ವೀಟ್ ಮಾಡಿ ಸೋನಮ್ ಕಪೂರನನ್ನು ಭೇಟಿಯಾಗಿದ್ದು ಖುಷಿ ನೀಡಿದೆ. ನಾವಿಬ್ಬರೂ ಫೋಟೋ ತೆಗೆಸಿಕೊಂಡಿದ್ದೇವೆ. ಆಕೆಯ ಜೊತೆ ಆಕೆಯ ಬಾಯ್ ಫ್ರೆಂಡ್ ಆನಂದ್ ಅಹೂಜಾ ಕೂಡ ಇದ್ದ ಎಂದಿದ್ದಾರೆ. ಸೋನಮ್ ಕಪೂರ್ ಕಳೆದ ಎರಡು ವರ್ಷಗಳಿಂದ ದೆಹಲಿ ಮೂಲದ ಬಿಜಿನೆಸ್ ಮೆನ್ ಆನಂದ್ ಅಹೂಜಾ ಜೊತೆ ಸಂಬಂಧವನ್ನಿರಿಸಿಕೊಂಡಿದ್ದಾಳೆ. ಆದರೆ ಇಬ್ಬರೂ ತಮ್ಮ ಸಂಬಂಧವನ್ನು ಅಲ್ಲಗಳೆದಿದ್ದಾರಂತೆ. ಒಟ್ಟಿನಲ್ಲಿ ಸೋನಮ್ ಕಪೂರ್ ಕೂಡಾ ಎಂಗೇಜ್ ಆಗಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. (ಎಸ್.ಎಚ್)

Leave a Reply

comments

Related Articles

error: