ಮೈಸೂರು

ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ವಿಶ್ವವಿಖ್ಯಾತಿಯಾಗಿದೆ: ಪ್ರತಾಪಸಿಂಹ

ಮೈಸೂರು, ಜು.3: ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ವಿಶ್ವವಿಖ್ಯಾತಿಯಾಗಿದ್ದು, ಇಂದು ವಿಶ್ವವೇ ಬೆಂಗಳೂರಿನತ್ತ ತಿರುಗಿ ನೋಡುತ್ತಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ವಿಜಯನಗರ ೩ನೇ ಹಂತದಲ್ಲಿ ಆಯೋಜಿಸಿದ್ದ ವಿಜಯನಗರ ಒಕ್ಕಲಿಗರ ವೇದಿಕೆ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ಬಳಿಕ ಮಾತನಾಡಿದ ಅವರು, ಯದುವಂಶದ ಅರಸರಂತೆ ಕೆಂಪೇಗೌಡರು ತಮ್ಮ ದೂರದರ್ಶಿತ್ವದಿಂದ ಬೆಂಗಳೂರನ್ನು ನಿರ್ಮಿಸಿದ್ದಾರೆ. ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರು ಇಂದು ಎಲ್ಲಾ ವರ್ಗದ ಜನರಿಗೂ ಆಶ್ರಯ ನೀಡಿದೆ. ವಿದೇಶಿ ಕಂಪನಿಗಳು ಬೆಂಗಳೂರಿನ ಕಡೆ ಮುಖಮಾಡಿವೆ. ದಿನದಿಂದ ದಿನಕ್ಕೆ ಉದ್ಯಾನ ನಗರಿ ವಿಸ್ತಾರವಾಗಿ ಬೆಳೆಯುತ್ತಿದೆ. ಇದಕ್ಕೆಲ್ಲಾ ಕೆಂಪೇಗೌಡರ ಶ್ರಮವೇ ಕಾರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ವಾಸು, ಜಿ.ಟಿ.ದೇವೇಗೌಡ, ಪಾಲಿಕೆ ಸದಸ್ಯ ಪ್ರಶಾಂತ್‌ಗೌಡ, ತಾ.ಪಂ.ಉಪಾಧ್ಯಕ್ಷ ಮಂಜು, ಜಿ.ಪಂ.ಮಾಜಿ ಅಧ್ಯಕ್ಷ ಶಿವಮೂರ್ತಿ, ಬೆಂಗಳೂರು ಎಸಿಪಿ ಜಿ.ಎನ್.ಮೋಹನ್, ವಿಜಯನಗರ ಒಕ್ಕಲಿಗರ ವೇದಿಕೆ ಗೌರವಾಧ್ಯಕ್ಷ ಡಾ.ಎಸ್.ಮರೀಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: