ಮೈಸೂರು

ವೈದ್ಯಕ್ಷೀಯ ಕ್ಷೇತ್ರದವರಿಗೆ ಕೌಶಲ್ಯದೊಂದಿಗೆ ಸೇವಾಮನೋಭಾವನೆಯೂ ಮುಖ್ಯ: ರಾಕೇಶ್ ಶರ್ಮ

ಮೈಸೂರು, ಜು.3: ವೈದ್ಯಕೀಯ ಕ್ಷೇತ್ರಕ್ಕೆ ಬರುವವರಿಗೆ ಕೌಶಲ್ಯದೊಂದಿಗೆ ಸೇವಾ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು ಎಂದು ಡಿಎಫ್‌ಆರ್‌ಎಲ್ ನಿರ್ದೇಶಕ ಡಾ.ರಾಕೇಶ್ ಶರ್ಮ ಸಲಹೆ ನೀಡಿದರು.
ಸೋಮವಾರ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ೨೦೧೭-೧೮ನೇ ಸಾಲಿನಲ್ಲಿ ವಿವಿಧ ಕೋರ್ಸುಗಳಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಮುಂದಿನ ದೃಷ್ಟಿಕೋನ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರಕ್ಕೆ ಬರುವವರಿಗೆ ಕೌಶಲ್ಯ ಅವಶ್ಯಕ. ಅದೇ ರೀತಿ ಸೇವಾ ಮನೋಭಾವನೆಯೂ ಮುಖ್ಯ. ವೈದ್ಯವೃತ್ತ ಇತರ ಎಲ್ಲಾ ವೃತ್ತಿಗಳಿಗಿಂತಲೂ ಭಿನ್ನವಾಗಿದ್ದು ಅದಕ್ಕೆ ಶ್ರದ್ಧೆ, ಕಾರ್ಯತತ್ಪರತೆ ಹಾಗೂ ಸೇವಾ ಮನೋಭಾವದಿಂದ ಅರ್ಪಿಸಿಕೊಳ್ಳಬೇಕು. ಶ್ರಮಪಟ್ಟು ಅಧ್ಯಯನ ಮಾಡಬೇಕು. ಆಗ ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ. ಇಲ್ಲದಿದ್ದರೆ ಉತ್ತಮ ವೈದ್ಯರಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತರಗತಿಗಳ ಉಪನ್ಯಾಸಗಳಿಗೆ ಸೀಮಿತವಾಗಬಾರದು ವೈದ್ಯಕ್ಷೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೂತನ ಸಂಶೋಧನೆಗಳನ್ನು ಕೈಗೊಳ್ಳಲು ಮುಂದಾಗಬೇಕು. ಸಮಾಜಕ್ಕೆ ಬೇಕಿರುವ ಔಷಧಗಳನ್ನು ಕಂಡುಹಿಡಿದು ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ವಿವಿಯ ನಿರ್ದೇಶಕ ಡಾ.ಪಿ.ಎ.ಕುಶಾಲಪ್ಪ, ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: