ಕ್ರೀಡೆ

ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ತಾಯಿಯಾಗುತ್ತಿದ್ದಾರೆ

ದೇಶ,(ನವದೆಹಲಿ)ಜು.3:-ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ವೆನಿಟಿ ಫೇರ್ ಮ್ಯಾಗ್ ಜೀನ್ ಕವರ್ ಪೇಜ್ ನಲ್ಲಿ ಹೊಸ ಲುಕ್ ನೀಡಿದ್ದಾರೆ. ಫೋಟೋದಲ್ಲಿ ಸೆರೆನಾ ಒಡಲಿನಲ್ಲಿರುವ ಕಂದನ ಜೊತೆ ಕಾಣಿಸಿಕೊಂಡಿದ್ದಾರೆ. ಸೆರೆನಾ ನಗ್ನಳಾಗಿದ್ದು, ಹುಟ್ಟುಡುಗೆಯಲ್ಲಿದ್ದಾಳೆ.

ನಾನು ತಾಯಿಯಾಗುತ್ತಿರುವ ವಿಷಯ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಎರಡು ದಿನ ಮೊದಲು ತಿಳಿಯಿತು. ಟೆನ್ನಿಸ್ ಕೋರ್ಟ್ ನಲ್ಲಿ ಆಟವಾಡುತ್ತಿರುವಾಗ ತಲೆತಿರುಗಿ ಬೀಳುವ ತನಕ ನನಗೇನೂ ತಿಳಿದಿರಲಿಲ್ಲ. ಆದರೆ ನನ್ನ ಸ್ನೇಹಿತರು ಸಂದೇಹ ವ್ಯಕ್ತಪಡಿಸಿದ್ದರಲ್ಲದೇ ವೈದ್ಯರ ಬಳಿ ತೆರಳಲು ತಿಳಿಸಿದ್ದರು. ಪರೀಕ್ಷೆಯ ನಂತರ ನಾನು ತಾಯಿಯಾಗುತ್ತಿರುವುದು ಕನ್ ಫರ್ಮ್ ಆಯಿತು  ಎಂದಿದ್ದಾಳೆ. ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ ಓಪನ್ ಹೇಗೆ ಆಡುವುದು ಈ ಬಾರಿ ವಿಂಬಲ್ಡನ್ ಗೆಲ್ಲಬೇಕೆಂಬ ಯೋಜನೆ ರೂಪಿಸಿದ್ದೆ ಎಂದಿದ್ದಾರಂತೆ.

ಜಗತ್ತಿನ ನಂಬರ್ ವನ್ ಆಟಗಾರ ಎಂಜಲಿಕ ಕರ್ಬರ್ ಸೆರೆನಾ ಆಟವಾಡುತ್ತಿಲ್ಲವೆಂದಾದರೆ ಈ ಬಾರಿ ಆಟದಲ್ಲಿ ಸ್ವಲ್ಪ ಬದಲಾವಣೆ ಕಂಡುಬರಲಿದೆ ಎಂದಿದ್ದಾರಂತೆ. (ಎಸ್.ಎಚ್)

Leave a Reply

comments

Related Articles

error: