ಮೈಸೂರು

ಗಾಲ್ಫ್ ಟೂರ್ನಮೆಂಟ್ ರೌಂಡ್ ಟೇಬಲ್ ಇಂಡಿಯ ಓಪನ್ : ಪ್ರಶಸ್ತಿ ವಿತರಣೆ

ಮೈಸೂರು,ಜು.3:- ಸಹಾಯಾರ್ಥ ಆಯೋಜಿಸಲಾದ, 10ನೇ  ಗಾಲ್ಫ್ ಟೂರ್ನಮೆಂಟ್ ರೌಂಡ್ ಟೇಬಲ್ ಇಂಡಿಯ ಓಪನ್ – 2017 ನ ಪ್ರಶಸ್ತಿ ವಿಜೇತರ ವಿವರ ಸೋಮವಾರ  ಪ್ರಕಟಗೊಂಡಿತು.

ಜಯಚಾಮರಾಜ ಒಡೆಯರ್ ಗಾಲ್ಫ್  ಕ್ಲಬ್, ಮೈಸೂರು ರೇಸ್ ಕ್ಲಬ್ ಹಾಗೂ ಮೈಸೂರು ರೌಂಡ್ ಟೇಬಲ್- 21 ಸಂಯುಕ್ತವಾಗಿ ಈ ಟೂರ್ನಮೆಂಟನ್ನು ಆಯೋಜಿಸಿತ್ತು. ಈ ಸಮಾರಂಭ 8 ವಿಭಾಗಗಳು ಭಾಗವಹಿಸಿದ ಸುಮಾರು 130 ಗಾಲ್ಫ್ ಉತ್ಸಾಹಕ್ಕೆ ಸಾಕ್ಷಿಯಾಯಿತು. ಈ ಸಹಾಯಾರ್ಥ ಗಾಲ್ಪ್ ಟೂರ್ನಮೆಂಟ್ ನ  ಪ್ರಮುಖ ಪ್ರಾಯೋಜಕತ್ತ್ವವನ್ನು ಕೊಟಾಕ್ ಸಂಸ್ಥೆ ಹಾಗು ಎಂ ಪಿ ಆರ್ ಒ ಸಂಸ್ಥೆಯು ಸಹಾಯಕ ಪ್ರಾಯೋಜಕತ್ತ್ವವನ್ನು ವಹಿಸಿಕೊಂಡಿದೆ. ದುಶಿಯಾಂತ್ ಶರ್ಮಾ, ಕೊಟಾಕ್ ಸಂಸ್ಥೆ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.  ಈ ಸಂದರ್ಭದಲ್ಲಿ   ಜೆಡಬ್ಲ್ಯೂಜಿಸಿ ಅಧ್ಯಕ್ಷ ಡಾ ಎಂ.ಎಸ್. ರಂಗನಾಥ, ಜೆಡಬ್ಲ್ಯೂಜಿಸಿ ಕ್ಯಾಪ್ಟನ್  ನಾಗೇಶ್, ಜೆಡಬ್ಲ್ಯೂಜಿಸಿ ಕಾರ್ಯದರ್ಶಿ ವಿ ಜಿ ಆಚಾರ್, ಜೆಡಬ್ಲ್ಯೂಜಿಸಿ ಪಂದ್ಯಾವಳಿಯ ಉಪ ಸಮಿತಿಯ ಅಧ್ಯಕ್ಷ ಸೋಮೇಶ್ ಮತ್ತು ಇತರರು ಉಪಸ್ಥಿತರಿದ್ದರು.

ಜುಲೈ 1 ರಿಂದ 2 ರವರೆಗೆ ಎರಡು ದಿನ ಕಾಲ ನಡೆದ ಈ ಟೂರ್ನಿಯನ್ನು ಮೈಸೂರಿನ ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು. ಮುಕ್ತ ಆಹ್ವಾನ ಟೂರ್ನಿಯಾಗಿದ್ದ ಇದರಲ್ಲಿ ಮೈಸೂರು, ಬೆಂಗಳೂರು ಮತ್ತು ಕೊಡಗು, ಮತ್ತಿತರ ಕಡೆಯಿಂದ ಆಗಮಿಸಿದ್ದ ಗಾಲ್ಫ್ ಪಟುಗಳು ಭಾಗವಹಿಸಿದ್ದರು ಹಾಗು ಗಾಲ್ಫ್ ರುಗಳು ಒಟ್ಟು ‘648’ ಸ್ಕಿನ್ ಪ್ರೈಜ್ ಗಳನ್ನು ಗೆದ್ದು ಕೊಂಡರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: