ಮೈಸೂರು

ವಿಷ ಸೇವಿಸಿ ರೈತ ಸಾವು

ಕೆ.ಆರ್.ನಗರ,ಜು.3-ಸಾಲಭಾದೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ತಂದ್ರೆ ಗ್ರಾಮದ ಸುಬ್ರಹ್ಮಣ್ಯ (೫೨) ಆತ್ಮಹತ್ಯೆಗೆ ಶರಣಾದ ರೈತ. ಹನಸೋಗೆ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ೩.೫೦ ಲಕ್ಷ ರೂ. ಮತ್ತು ೨.೫೦ ಲಕ್ಷ ರೂ. ಕೈ ಸಾಲ ಸಾಲ ಮಾಡಿಕೊಂಡಿದ್ದರು.

ತನ್ನ ೧.೨೦ ಎಕರೆ ಜಮೀನಿನಲ್ಲಿ ಬೆಳೆದಿದ್ದ ತಂಬಾಕು ಬೆಳೆ ಕೈ ಕೊಟ್ಟ ಹಿನ್ನಲೆಯಲ್ಲಿ ಜಮೀನಿನ ಬಳಿ ವಿಷಸೇವಿಸಿ ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: