ಮನರಂಜನೆ

ಎರಡನೇ ವಿವಾಹದ ಸಿದ್ಧತೆಯಲ್ಲಿರುವ ಕರಿಶ್ಮಾ

ದೇಶ(ಮುಂಬೈ)ಜು.3:-ಬಾಲಿವುಡ್ ನಲ್ಲಿ ತನ್ನದೇ ಆದ ನಟನೆಯಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದ ನಟಿ ಕರಿಶ್ಮಾ ಕಪೂರ್ ಇದೀಗ ವ್ಯಕ್ತಿಯೋರ್ವರ ಹೃದಯವನ್ನೂ ಕದ್ದಿದ್ದು, ಸದ್ಯದಲ್ಲಿಯೇ ಅವರ ಜೀವನವನ್ನು ಪ್ರವೇಶಿಸಲಿದ್ದಾಳಂತೆ.

ಕರಿಶ್ಮಾ ಬಾಯ್ ಫ್ರೆಂಡ್ ಸಂದೀಪ್ ಸದ್ಯದಲ್ಲಿಯೇ ಕರಿಶ್ಮಾಳ ಮುಂದೆ ವಿವಾಹದ ಮಾತುಕತೆ ಇಡಲಿದ್ದಾರಂತೆ. ಮೊದಲ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಸಂದೀಪ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಳು ಎಂದು ಹೇಳಲಾಗುತ್ತಿದೆ. ಮೊದಲು ಮಾಧ್ಯಮದ ಕಣ್ಣನ್ನು ತಪ್ಪಿಸಿ ತಿರುಗಾಡುತ್ತಿದ್ದ ಈ ಜೋಡಿ ಇದೀಗ ಎಲ್ಲರೆದುರು ಕಾಣಿಸಿಕೊಂಡಿದ್ದಾರೆ. ಕಪೂರ್ ಕುಟುಂಬ ಕೂಡ ಸಂದೀಪ್ ನನ್ನು ಮೆಚ್ಚಿಕೊಂಡಿದೆ. ಸಂದೀಪ್ ಹೆಸರಾಂತ ಕಂಪನಿಯೊಂದರಲ್ಲಿ ಸಿಇಓ ಆಗಿದ್ದಾರಂತೆ. ಕಪೂರ್ ಮನೆಯಲ್ಲಿ ಏನೇ ಸಮಾರಂಭವಿದ್ದರೂ ಕರಿಶ್ಮಾ ಜೊತೆ ಸಂದೀಪ್ ಕಾಣಿಸಿಕೊಳ್ಳುತ್ತಾರಂತೆ. ಸಂದೀಪ್ ಕೂಡ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯುತ್ತಿದ್ದು, ಇನ್ನೂ ವಿಷಯ ನ್ಯಾಯಾಲಯದಲ್ಲಿಯೇ ಇದ್ದು,  ವಿಚಾರಣೆ ಜು.19ರಂದು ನಡೆಯಲಿದೆ. ಈ ಸಮಯ ವಿಷಯ ನಿಖರವಾಗಲಿದೆ. ಸಂದೀಪ್ ಜುಹೂದಲ್ಲಿ ಕರಿಶ್ಮಾಗೆ  ಮೂರು ಬೆಡ್ ರೂಂ ಮನೆಯನ್ನು ಕೊಡಿಸಲಿದ್ದಾರಂತೆ. (ಎಸ್.ಎಚ್)

Leave a Reply

comments

Related Articles

error: