ಮೈಸೂರು

ಮನೆಗೆ ನುಗ್ಗಿ ಮೊಬೈಲ್ ಕಸಿದು ಪರಾರಿ

ಮೈಸೂರು,ಜು.3:-ಹಾಡುಹಗಲೇ ಯುವಕನೋರ್ವ ಮನೆಗೆ ನುಗ್ಗಿ ಮೊಬೈಲ್ ಎಗರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ರಾಮಸ್ವಾಮಿ ವೃತ್ತದ ಗೊಲ್ಲಗೇರಿ ಕೃಷ್ಣ ಬೇಕರಿ ಸಮೀಪ ಪರಿಚಿತರ ನೆಪದಲ್ಲಿ ಬಂದು ಮನೆಯಲ್ಲಿರುವವರ ಗಮನ ಬೇರೆಡೆ ಸೆಳೆದು ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ವಿಮಲ ಎಂಬ ಮಹಿಳೆಯೇ ಮೊಬೈಲ್ ಕಳೆದುಕೊಂಡವರಾಗಿದ್ದಾರೆ. ಏಕಾ ಏಕಿ ಮನೆಗೆ ಬಂದು ಟೇಬಲ್ ಮೇಲೆ ಇಟ್ಟಿದ್ದ ಮೊಬೈಲ್ ಕಸಿದು ಪರಾರಿಯಾಗಿದ್ದು, ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ  ಯುವಕನನ್ನು ಹಿಡಿಯಲು ವಿಫಲ ಯತ್ನ ನಡೆಸಿದರಾದರೂ ಯುವಕ ತಪ್ಪಿಸಿಕೊಂಡಿದ್ದಾನೆ.
ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಆರ್.ವಿ,ಎಸ್.ಎಚ್)

Leave a Reply

comments

Related Articles

error: