ಲೈಫ್ & ಸ್ಟೈಲ್

ಸೀತಾಫಲ ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸಿ

ಸೀತಾಫಲ  ಇಷ್ಟವಾಗದವರು ಯಾರೂ ಇರಲಿಕ್ಕಿಲ್ಲ.  ಹಣ್ಣಿನ ತುಂಬಾ ಬೀಜವೇ ತುಂಬಿದ್ದರೂ ಅದರೊಳಗಿನ ಸಿಹಿ ಮಾತ್ರ ಎಲ್ಲರನ್ನೂ ಮರುಳು ಮಾಡುತ್ತದೆ. ಚಳಿಗಾಲ ಆರಂಭವಾಗುತ್ತಲೇ ಮಾರುಕಟ್ಟೆಯಲ್ಲಿ ಸೀತಾಫಲ ಹಣ್ಣುಗಳ ಆವಕವಾಗತೊಡಗುತ್ತವೆ. ಈ ಹಣ್ಣನ್ನು ಸೇವಿಸುವುದರಿಂದ ಹಲವು ಉಪಯೋಗಗಳಿವೆ. ಅದು ಕೆಲವರಿಗೆ ತಿಳಿದಿರಲಿಕ್ಕಿಲ್ಲ. ಅದಕ್ಕಾಗಿ ಇಲ್ಲಿವೆ ಕೆಲವು ಮಾಹಿತಿ.

ತೂಕದಲ್ಲಿ ಹೆಚ್ಚಳ: ಕೆಲವರಿಗೆ ತಾವು ಯಾಕಾದರೂ ಇಷ್ಟು ತೂಕ ಇದ್ದೇವೇನೋ ಅನ್ನಿಸಿದರೆ ಇನ್ಕೆಲವರು ತಮ್ಮ ತೂಕ ಹೆಚ್ಚಾಗಲು ಏನು ಮಾಡಬೇಕು ಎಂಬ ಚಿಂತೆಯಲ್ಲಿರುತ್ತಾರೆ. ಅಂತವರಿಗೆ ಇಲ್ಲಿದೆ ಸಲಹೆ ಸೀತಾಫಲವನ್ನು ಸೇವಿಸುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.

 ರೋಗ ನಿರೋಧಕ: ಈ ಹಣ್ಣಿನಲ್ಲಿ ಪ್ರಕೃತಿದತ್ತವಾದ ಆ್ಯಂಟಿಆಕ್ಸಿಡೆಂಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ನಮ್ಮ ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ದಿನಕ್ಕೊಂದು ಸೀತಾಫಲ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು.

ಬಲ ಹೆಚ್ಚಿಸುತ್ತದೆ: ನೀವು ಪದೇ ಪದೇ ನಿಶ್ಯಕ್ತಿಯಿಂದ ಬಳಲುತ್ತಿದ್ದೀರಾ? ಸೀತಾಫಲದಲ್ಲ ಹೆಚ್ಚಿನ ಶಕ್ತಿ ನೀಡುವ ಗುಣಗಳಿವೆ. ಅದು ನಮ್ಮಲ್ಲಿರುವ ನಿಶ್ಯಕ್ತಿಯನ್ನು ತೊಲಗಿಸಿ ಮಾಂಸಖಂಡಗಳ ಬಲ ಹೆಚ್ಚಿಸುತ್ತದೆ.

ಚೈತನ್ಯಪೂರಕ: ಇದರಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿದ್ದು, ಮೆದುಳಿಗೆ ಪೂರಕವಾಗಿದ್ದು, ಬುದ್ಧಿಯನ್ನು ಸ್ಥಿಮಿತದಲ್ಲಿಟ್ಟು ಮಾನಸಿಕ ಶಾಂತಿಯನ್ನು ನೀಡುತ್ತದೆ.

ದಂತ ಪಂಕ್ತಿ ಬಲಿಷ್ಠ: ನಿಯಮಿತವಾಗಿ ಸೇವಿಸುವುದರಿಂದ ದಂತಪಂಕ್ತಿಗಳಲ್ಲಿ ಬಲ ಹೆಚ್ಚಿಸುವುದಲ್ಲದೇ ನೋವನ್ನು ನಿವಾರಿಸಿ, ದಂತದ ಆರೋಗ್ಯವನ್ನು ಕಾಪಾಡುತ್ತದೆ.

ರಕ್ತವೃದ್ಧಿ: ಅನಿಮಿಯಾ ಅಥವಾ ರಕ್ತಹೀನತೆಯಿಂದ ಬಳಲುತ್ತಿರುವವರು ಪ್ರತಿದಿನ ಒಂದು ಸೀತಾಫಲ ಸೇವಿಸಿದರೆ ಅವರಲ್ಲಿ ರಕ್ತವೃದ್ಧಿಯಾಗಲಿದೆ.

ದೃಷ್ಟಿ ದೋಷದಿಂದ ಮುಕ್ತ: ಇದರಲ್ಲಿ ವಿಟಾಮಿನ ಸಿ ಮತ್ತು ರಿಬೊಪ್ಲಾವಿನ್ ಹೇರಳವಾಗಿರುವುದರಿಂದ ದೃಷ್ಟಿದೋಷವನ್ನು ನಿವಾರಿಸಿ, ಕಣ್ಣಿನ ಕಾಂತಿಯನ್ನು ಹೆಚ್ಚಿಸುತ್ತದೆ.

ಹೃದ್ರೋಗದಿಂದ ಮುಕ್ತಿ: ಸೋಡಿಯಂ ಮತ್ತು ಪೊಟ್ಯಾಶಿಯಂ ಹೇರಳವಾಗಿರುವುದರಿಂದ ರಕ್ತ ಸಂಚಾರ ಸರಾಗವಾಗಲು ಸಹಾಯವಾಗುವುದಲ್ಲದೇ ಹೃದಯವನ್ನು ಬಲಿಷ್ಠಗೊಳಿಸುತ್ತದೆ.

ಸೀತಾಫಲವು ಸ್ವಾದಿಷ್ಟವಾದ ಹಣ್ಣಾಗಿರುವುದರ ಜೊತೆಜೊತೆಗೆ ಕೆಲವು ಔಷಧೀಯ ಗುಣಗಳನ್ನು ಹೊಂದುವ ಮೂಲಕ ಅನೇಕ ರೋಗಗಳನ್ನು ಹೊಡೆದೋಡಿಸುತ್ತದೆ.

Leave a Reply

comments

Related Articles

error: